ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಮಂಡ್ಯ ಜಿಲ್ಲೆಯ ನಾಗಮಂಗಲ(Nagamangala) ಬಳಿಕ ದಾವಣಗೆರೆಯಲ್ಲೂ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ. ಗುರುವಾರ ಸಂಜೆ ಗಣೇಶಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ ಇಂದು 30 ಆರೋಪಿಗಳನ್ನು ಬಂಧಿಸಲಾಗಿದೆ. ಮನೆಗಳಿಗೆ ನುಗ್ಗಿದ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ. ನಗರ ನಾಲ್ಕು ಪೊಲೀಸ್ ಠಾಣೆಗಳಲ್ಲಿ 4 ಎಫ್ಐಆರ್(FIR) ಗಳು ದಾಖಲಾಗಿವೆ. ಪೊಲೀಸರು ಲಾಠಿ ಏಟು ಕೊಟ್ಟು ಒಬ್ಬೊಬ್ಬರನ್ನು ಎತ್ತಾಕೊಂಡು ಹೋಗಿದ್ದಾರೆ.
ಗುರುವಾರ ಸಂಜೆ ಸುಮಾರು 7.30ರ ಸುಮಾರಿಗೆ ಗಣೇಶಮೂರ್ತಿ ಮೆರವಣಿಗೆ ವೆಂಕಟೇಶ್ವರ್ ಸರ್ಕಲ್ ಹತ್ತಿರ ಬಂದಾಗ ಕೆಲವರು ಘೋಷಣೆ ಕೂಗಿದ್ದಾರೆ. ಇದು ಗಲಾಟೆಗೆ ಕಾರಣವಾಗಿ ಏಕಾಏಕಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ಪೊಲೀಸ್ ಕಾನ್ ಸ್ಟೆಬಲ್ ಗಳಾದ ರಘು ಹಾಗೂ ಅನುಪೂರ್ಣ ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ 50 ರಿಂದ 60 ಜನ ಕಿಡಿಗೇಡಿಗಳು ಆನೆಕೊಂಡ ಬಡಲಾವಣೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್ ಕಾರುಗಳನ್ನು ಹಾನಿಗೊಳಿಸಿದ್ದಾರೆ.