ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ರಾಜ್ಯದಲ್ಲಿ ಸಾಲು ಸಾಲು ರೌಡಿ ಶೀಟರ್ ಗಳ ಹತ್ಯೆಗಳು ನಡೆಯುತ್ತಿವೆ. ಮಂಗಳೂರು, ರಾಮನಗರ, ಮೈಸೂರು ಬಳಿಕ ಈಗ ದಾವಣಗೆರೆಯಲ್ಲಿ ರೌಡಿ ಶೀಟರ್ ನೊಬ್ಬನ ಹತ್ಯೆ ನಡೆದಿದೆ. ಸಂತೋಷಕುಮಾರ ಅಲಿಯಾಸ್ ಕಣುಮಾ ಹತ್ಯೆಯಾದ ರೌಡಿ ಶೀಟರ್ ಆಗಿದ್ದಾನೆ. ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.
ನಗರದ ಸೋಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎದುರು ಕೊಲೆ ಮಾಡಲಾಗಿದೆ. ಆಟೋದಲ್ಲಿ ನಾಲ್ಕೈದು ಜನ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ತಂಡ ರಚನೆ ಮಾಡಲಾಗಿದೆ.