Ad imageAd image

ಪ್ರಶ್ನೆ ಪತ್ರಿಕೆ ಜೊತೆಗೆ ಉತ್ತರವೂ ಮುದ್ರಿಸಿದ ದಾವಣಗೆರೆ ವಿವಿ

ಪ್ರಶ್ನೆ ಪತ್ರಿಕೆ ಜೊತೆಗೆ ಉತ್ತರವನ್ನೂ ಮುದ್ರಿಸಿದ ಪ್ರಸಂಗ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದಿದೆ. ವಾಣಿಜ್ಯ ವಿಭಾಗದ ಓಪನ್ ಎಲೆಕ್ಟಿವ್ ಪರೀಕ್ಷೆ ಮಂಗಳವಾರ

Nagesh Talawar
ಪ್ರಶ್ನೆ ಪತ್ರಿಕೆ ಜೊತೆಗೆ ಉತ್ತರವೂ ಮುದ್ರಿಸಿದ ದಾವಣಗೆರೆ ವಿವಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ದಾವಣಗೆರೆ(Davanagere): ಪ್ರಶ್ನೆ ಪತ್ರಿಕೆ(Question Paper) ಜೊತೆಗೆ ಉತ್ತರವನ್ನೂ ಮುದ್ರಿಸಿದ ಪ್ರಸಂಗ ದಾವಣಗೆರೆ(University) ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದಿದೆ. ವಾಣಿಜ್ಯ ವಿಭಾಗದ ಓಪನ್ ಎಲೆಕ್ಟಿವ್ ಪರೀಕ್ಷೆ ಮಂಗಳವಾರ ಮುಂಜಾನೆ 10ಕ್ಕೆ ಸಮಯ ನಿಗದಿಯಾಗಿದೆ. 60 ಅಂಕಗಳ ಪ್ರಶ್ನೆ ಪತ್ರಿಕೆ ಜೊತೆಗೆ ಉತ್ತರವನ್ನು ಮುದ್ರಿಸಲಾಗಿದೆ. ಇದನ್ನೇ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಮೇಲ್ವಿಚಾರಕರ ಗಮನಕ್ಕೆ ಇದು ಬಂದಿದೆ. ಪರೀಕ್ಷೆ ಮುಂದೂಡಲಾಗಿದೆ.

ತಾಂತ್ರಿಕ ಸಮಸ್ಯೆಯಿಂದ ಲೋಪವಾಗಿದೆ. ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಪರೀಕ್ಷಾಸಂಗದ ಕುಲಸಚಿವ ಪ್ರೊ.ಸಿ.ಕೆ ರಮೇಶ್ ತಿಳಿಸಿದ್ದಾರೆ. ದಾವಣಗೆರೆ, ಚಿತ್ರದುರ್ಗದ(Chitradurga) ಜಿಲ್ಲೆಗಳ 70 ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು(Students) ಈ ವಿಷಯ ಆಯ್ಕೆ ಮಾಡಿಕೊಂಡಿದ್ದರು. 15 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಘಟನೆ ಬಳಿಕ ಪರೀಕ್ಷೆ ಮುಂದೂಡಲಾಗಿದೆ.

WhatsApp Group Join Now
Telegram Group Join Now
Share This Article