ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮಾತುಗಳನ್ನು ಆಡಿದ್ದಾರೆ. 2020ರಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದೆ. 2023ರಲ್ಲಿ ಬಹುಮತ ಬಂತು ಉಪ ಮುಖ್ಯಮಂತ್ರಿಯಾದೆ. ಈಗಾಗ್ಲೇ ಐದು ವರ್ಷ ತಿಂಗಳು ಕೆಪಿಸಿಸಿ ಅಧ್ಯಕ್ಷನಾಗಿ ಪೂರೈಸಿದ್ದೇನೆ. ಈ ಸ್ಥಾನದಲ್ಲಿ ನಾನು ಶಾಶ್ವತವಾಗಿ ಇರಲು ಬಯಸುವುದಿಲ್ಲ ಎಂದಿದ್ದಾರೆ.
ಉಪ ಮುಖ್ಯಮಂತ್ರಿಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧನಿದ್ದೆ. ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಅವರ ಮಾತಿನಂತೆ ಮುಂದುವರೆದಿದೆ. ಬರುವ ಮಾರ್ಚ್ ಗೆ 6 ವರ್ಷವಾಗುತ್ತೆ. ಬೇರೆಯವರಿಗೂ ಅವಕಾಶ ನೀಡಬೇಕು ಅಂತಾ ಹೇಳಿದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಸಮಾಧಾನ ಮಾಡಿ, ನಾನು ಇದ್ದೇನೋ ಇಲ್ಲವೋ ಮುಖ್ಯವಲ್ಲ. ಪಕ್ಷದ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತೇನೆ. ಗಾಂಧಿ ಕುಟುಂಬ, ಎಐಸಿಸಿ ಅಧ್ಯಕ್ಷರು ಬಯಸವು ತನಕ ಕೆಲಸ ಮಾಡುತ್ತೇನೆ ಎಂದರು.




