ಪ್ರಜಾಸ್ತ್ರ ಸುದ್ದಿ
ವಿಶಾಖಪಟ್ಟಣ(visakhapatnam): ಭಾರತ ಹಾಗೂ ಸೌಥ್ ಆಫ್ರಿಕಾ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ 47.5 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಗಿದೆ. ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ 106 ರನ್ ಗಳಿಸಿದರು. ಇದರಲ್ಲಿ 6 ಸಿಕ್ಸ್, 8 ಫೋರ್ ಗಳು ಬಂದಿವೆ. ನಾಯಕ ಬವುಮಾ 48 ರನ್ ಗಳಿಸಿದರು.
ಟೀಂ ಇಂಡಿಯಾ ಪರ ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ತಲಾ 4 ವಿಕೆಟ್ ಪಡೆದು ಸಂಭ್ರಮಿಸಿದರು. ಜಡೇಜಾ ಹಾಗೂ ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು. ಈಗಾಗ್ಲೇ 1-1 ಸಮಬಲ ಸಾಧಿಸಿದ್ದು, ಈ ಪಂದ್ಯ ಗೆಲ್ಲುವ ತಂಡ ಸರಣಿಯನ್ನು ವಶಕ್ಕೆ ಪಡೆಯಲಿದೆ.




