ಪ್ರಜಾಸ್ತ್ರ ಸುದ್ದಿ
ಕಾರವಾರ(Karawara): ಹೆದ್ದಾರಿ ಮಾರ್ಗದಲ್ಲಿರುವ ಸುರಂಗದಲ್ಲಿ ಬುಧವಾರ ನಸುಕಿನಜಾವ 2.30ರ ಸುಮಾರಿಗೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಓರ್ವ ಮೃತಪಟ್ಟಿದ್ದಾನೆ. ಪುತ್ತೂರು ಮೂಲದ ರಂಜಿತಕುಮಾರ್ ವಿಶ್ವನಾಥ ನಾಯ್ಕ(35) ಮೃತ ಯುವಕ ಎಂದು ತಿಳಿದು ಬಂದಿದೆ. ಗೋವಾ ಕಡೆಯಿಂದ ಪುತ್ತೂರಿಗೆ ಹೊರಟಿದ್ದ ಎಂದು ತಿಳಿದು ಬಂದಿದೆ.
ಆಲ್ಟೋ ಕಾರು ಚಲಾಯಿಸುತ್ತಿದ್ದ ರಂಜಿತಕುಮಾರ್ ಮುಂದೆ ಇದ್ದ ಮತ್ತೊಂದು ಕಾರನ್ನು ಓವರ್ ಟೇಕ್ ಮಾಡಲು ಹೋಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಎರಡು ಕಾರುಗಳ ನಡುವೆ ಸುರಂಗದಲ್ಲಿ ಅಪಘಾತವಾಗಿದೆ.