Ad imageAd image

ಬಸ್ ಡಿಕ್ಕಿ, ಮಹಿಳೆ ಸಾವು

Nagesh Talawar
ಬಸ್ ಡಿಕ್ಕಿ, ಮಹಿಳೆ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಗುರುವಾರ ಸಂಜೆ ಸಾರಿಗೆ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಪಟ್ಟಣದ ನಿವಾಸಿ ಶಾಂತಾಬಾಯಿ ಯಲ್ಲಪ್ಪ ಬಂಡಿವಡ್ಡರ(50) ಎಂದು ಹೇಳಲಾಗುತ್ತಿದೆ. ರಸ್ತೆ ದಾಟುವಾಗ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ಕಲ್ಯಾಣ ಕರ್ನಾಟಕ ಸಾರಿಗೆಗೆ ಸೇರಿರುವ ಬಸ್ ಇದಾಗಿದ್ದು, ರಾಯಚೂರು ಮೀರಜ ನಡುವೆ ಸಂಚರಿಸುವುದಾಗಿದೆ. ಸಿಂದಗಿ ಬಸ್ ನಿಲ್ದಾಣದ ಕಡೆಗೆ ಹೊರಟಿದ್ದಾಗ ಸಂಜೆ ಬಸವೇಶ್ವರ ವೃತ್ತದ ಹತ್ತಿರ ಅಪಘಾತವಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article