ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಬೈಕ್ ಹಾಗೂ ಲಾರಿ ನಡುವೆ ಅತ್ಯಂತ ಭೀಕರವಾಗಿ ಅಪಘಾತ ನಡೆದ ಘಟನೆ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್ ಗೆ ಸಂಪರ್ಕ ಸಾದಿಸುವ ಶ್ರೀರಾಮ ಮಂದಿರ ಹತ್ತಿರ ಮಂಗಳವಾರ ರಾತ್ರಿ ನಡೆದಿದೆ. ಸುರೇಶ್(35) ಸ್ಥಳದಲ್ಲಿಯೇ ಭೀಕರವಾಗಿ ಮೃತಪಟ್ಟಿದ್ದಾನೆ. ಇವರ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅಪಘಾತ ಎಷ್ಟೊಂದು ಭೀಕರವಾಗಿತ್ತು ಎಂದರೆ ಮೃತ ಸುರೇಶನ ದೇಹ ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ. ಹೃದಯ ಹೊರಗೆ ಬಂದಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ನಿನ್ನೆ ರಾತ್ರಿ ಬೈಕ್ ನಲ್ಲಿ ಸುರೇಶ್ ಮಗನೊಂದಿಗೆ ಹೊರಟಿದ್ದರು. ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶ ಮೂಲದ ಸುರೇಶ್ ಇಲ್ಲಿ ಗ್ರಾನೈಟ್ ಕೆಲಸ ಮಾಡುತ್ತಿದ್ದ.