ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಮೇಲ್ಸೇತುವೆ ಕಾಮಗಾರಿ ವೇಳೆ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಎಎಸ್ಐ(ASI) ಪ್ರಕರಣ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಎಎಸ್ಐ ನಾಬಿರಾಜ ದಯಣ್ಣವರ ಸೆಪ್ಟೆಂಬರ್ 10ರಂದು ಉಪನಗರ ಠಾಣೆಯಿಂದ ಸವಾಯಿ ಗಂಧರ್ವ ಸಭಾಂಗಣಕ್ಕೆ ಕರ್ತವ್ಯದ ಮೇಲೆ ಬೈಕ್ ನಲ್ಲಿ ಹೋಗುತ್ತಿದ್ದರು. ಹಳೇ ಕೋರ್ಟ್ ಹತ್ತಿರ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ವೇಳೆ ಕ್ರೇನ್ ಮೂಲಕ ಕಬ್ಬಿಣದ ರಾಡ್ ಮೇಲೆತ್ತುವಾಗ ಇವರ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೆಎಂಸಿ ಐಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮೃತಪಟ್ಟಿದ್ದು, ಇದೀಗ 11 ಮಂದಿಯನ್ನು ಬಂಧಿಸಲಾಗಿದೆ.
ಎಂಜಿನಿರ್ ಗಳಾದ ಭೂಪೇಂದ್ರಪಾಲ್ ಸಿಂಗ್, ಜಿತೇಂದ್ರಪಾಲ್ ಶರ್ಮಾ, ಕಾಮಗಾರಿ ಪರಿವೀಕ್ಷಕ ಹರ್ಷ ಹೊಸಗಾಣಿಗೇರ, ಕ್ರೇನ್ ಚಾಲಕ ಅಸ್ಲಂ ಜಲೀಲಮಿಯಾ, ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಹಿಮಾನ್, ಸಿಬ್ಬಂದಿ ರಿಜಾವಲ್ ಮಂಜೂರ ಅಲಿ, ಮೊಹಮ್ಮದ್ ಮಿಯಾ, ಮೊಹಮ್ಮದ್ ಮಸದೂರ್, ಶಮೀಮ್ ಶೇಖ್, ಮೊಹಮ್ಮದ್ ಹಾಜಿ, ಮೊಹಮ್ಮದ್ ಖಯೂಮ್ ಸೇರಿ 11 ಆರೋಪಿಗಳನ್ನು(Arrest) ಬಂಧಿಸಲಾಗಿದೆ. ಇನ್ನು ಕೆಲವರ ಬಂಧನದ ಸಾಧ್ಯತೆಯಿದೆ.