ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಎತ್ತಿನಗಾಡಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಹತ್ತಿರ ನಡೆದಿದೆ. ಹನುಮನಮಟ್ಟಿಯಿಂದ ಮೈಲಾರ ಜಾತ್ರೆಗೆ ಹೊರಟಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ದರ್ಶನ್(23), ಆಕಾಶ್ ಬಿರಾದಾರ(23) ಹಾಗೂ ಶಶಿಕುಮಾರ ಉಪ್ಪಾರ(25) ಮೃತ ದುರ್ದೈವಿಗಳು.
ಶಶಿಕುಮಾರ ಹನುಮನಮಟ್ಟಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಕಾಶ್, ದರ್ಶನ್ ಬಿಎಸ್ಸಿ ಓದುತ್ತಿದ್ದರು. ಮೂವರು ಬೈಕ್ ನಲ್ಲಿ ಮೈಲಾರ ಜಾತ್ರೆಗೆ ಹೊರಟಿದ್ದರು. ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.