ಪ್ರಜಾಸ್ತ್ರ ಸುದ್ದಿ
ಆಂಧ್ರ ಪ್ರದೇಶ(Andhra Pradesh): ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ಸಲುವಾಗಿ ಖರೀದಿ ಕೇಂದ್ರದ ಬಳಿ ಉಂಟಾದ ಕಾಲ್ತುಳಿತದಲ್ಲಿ 7 ಜನರು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರುಯು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಕುಂಠ ದರ್ಶನಕ್ಕೆ ಬಂದ ಭಕ್ತರನ್ನು ಪದ್ಮಾವತಿ ಉದ್ಯಾನದಲ್ಲಿ ಇರಿಸಲಾಗಿತ್ತು. ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗೇಟ್ ತೆಗೆಯಲಾಗಿದೆ. ಆದರೆ, ಜನರು ಟಿಕೆಟ್ ನೀಡಲು ಗೇಟ್ ಓಪನ್ ಮಾಡಲಾಗಿದೆ ಎಂದು ಭಾವಿಸಿ ನುಗ್ಗಿದ್ದಾರೆ.
ನಿನ್ನೆ ಸಂಜೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಟಿಕೆಟ್ ಗಾಗಿ 9 ಕ್ಷೇತ್ರಗಳ 95 ಕೇಂದ್ರಗಳಲ್ಲಿ ನಿಂತಿದ್ದಾರೆ. ಗೇಟ್ ಓಪನ್ ಆಗಿರುವುದು ಟಿಕೆಟ್ ನೀಡುವ ಸಲುವಾಗಿಯೇ ಎಂದು ತಿಳಿದು ಭಕ್ತರು ಮುನ್ನುಗ್ಗಿದ್ದಾರೆ. ಇದರ ಪರಿಣಾಮ ಕಾಲ್ತುಳಿತ ಉಂಟಾಗಿ ಅನಾಹುತ ನಡೆದಿದೆ. ರಜಿನಿ, ಲಾವಣ್ಯ, ಬಿ.ನಾಯ್ಡು ಬಾಬು, ಕರ್ನಾಟಕದ ಬಳ್ಳಾರಿಯ ನಿರ್ಮಲಾ, ವಿಶಾಖಪಟ್ಟಣದ ಶಾಂತಿ, ತಮಿಳುನಾಡಿನ ಮಲ್ಲಿಗಾ ಮೃತಪಟ್ಟಿದ್ದಾರೆ.