ಪ್ರಜಾಸ್ತ್ರ ಸುದ್ದಿ
ವಯನಾಡು(Wayanadu): ಕೇರಳದ(Kerala) ವಾಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ(Landslide) ಇದುವರೆಗೂ 148 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಉಂಟಾದ ಭೂಕುಸಿತ ನೂರಾರು ಜನರನ್ನು ಬಲಿ ಪಡೆದಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಸಂಖ್ಯೆಯ ಜನರ ಬದುಕು ಅತಂತ್ರವಾಗಿದೆ. ಅವಶೇಷಗಳಡಿಯಲ್ಲಿ ಇನ್ನೂ ನೂರಾರು ಮಂದಿ ಸಿಲುಕಿರುವ ಶಂಕೆ ಇದ್ದು, ಎನ್ ಡಿಆರ್ ಎಫ್(NDRF) ತಂದ ಕಾರ್ಯಾಚರಣೆ ಮುಂದುವರೆಸಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಮಲಪ್ಪುರಂ, ಮೇಪ್ಪಾಡಿ, ಅಟ್ಟಮಲ, ಚೂರಲ್ ಮಲ ಭಾಗದಲ್ಲಿ ತೀವ್ರ ಹಾನಿಯಾಗಿದೆ. ಪೋತುಕಲ್ ನಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿ ಮಕ್ಕಳ, ಮಹಿಳೆಯರ, ವೃದ್ಧರ ಮೃತದೇಹಗಳು ಪತ್ತೆಯಾಗಿವೆ. ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಮೃತದೇಹಗಳು ಗುರುತು ಸಿಗದಂತಾಗಿವೆ. ಹೀಗಾಗಿ ಅವುಗಳ ಗುರುತು ಪತ್ತೆ ಕಾರ್ಯ ಸಹ ನಡೆದಿದೆ.