ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೋರ್ಟ್ ಅಂಗಳದಲ್ಲಿ ವಾದ ಮಾಡಿ ಸುದ್ದಿ ಮಾಡಿದಕ್ಕಿಂತ ಕ್ಯಾಮೆರಾ ಮುಂದೆ ಸಿಕ್ಕಾಪಟ್ಟೆ ಆರ್ಭಟ ತೋರಿಸುವ ವಕೀಲ ಜಗದೀಶ್ ಅಸಲಿಗೆ ಪಿಯುಸಿ ಸಹ ಪಾಸ್ ಮಾಡಿಲ್ಲವೆಂದು ಹೇಳಲಾಗುತ್ತಿದೆ. ಹೀಗಾಗಿ ದೆಹಲಿ ಬಾರ್(Delhi Bar Council) ಕೌನ್ಸಿಲ್ ಅವರ ವಕೀಲಿಕಿ ಸನ್ನದು ರದ್ದುಗೊಳಿಸಿ ಆದೇಶ ಹೊರಡಿಸಿದೆಯಂತೆ. ಸಧ್ಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿರುವ ಜಗದೀಶ್ ಅವರನ್ನು ಇನ್ಮುಂದೆ ವಕೀಲರು ಎಂದು ಕರೆಯಾರದು ಅಂತಾ ಹೇಳಲಾಗುತ್ತಿದೆ.
ಪಿಯುಸಿ ಓದದೆ ನಕಲಿ ಅಂಕಪಟ್ಟಿ ಸಿದ್ಧಪಡಿಸಿದ್ದಾರೆ. ಇದರ ಮೇಲೆ ಪದವಿ, ಕಾನೂನು ಪದವಿ ಪಡೆದಿದ್ದಾರೆ. ಬೆಂಗಳೂರು ಬದಲಿಗೆ ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಲ್ ನಿಂದ ವಕೀಲಕಿ ಸನ್ನದು ಪಡೆದಿದ್ದಾರೆ. ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಹಿಮಾಂಶು ಭಾಟಿ ಎನ್ನುವರು ಬಾರ್ ಕೌನ್ಸಿಲ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ವಕೀಲಕಿ ಸನ್ನದು ರದ್ದುಗೊಳಿಸಲಾಗಿದೆಯಂತೆ.