ಪ್ರಜಾಸ್ತ್ರ ಸುದ್ದಿ
ಶ್ರೀನಗರ(Srinagara): ಕಳೆದ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಹತ್ತಿರದ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ ಸಂಭವಿಸಿ 15 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಸೋಮವಾರ ಎನ್ಐಎ ಅಧಿಕಾರಿಗಳು ಜಮ್ಮು ಕಶ್ಮೀರದ ವಿವಿಧ ಕಡೆ ಶೋಧ ಕಾರ್ಯ ನಡೆಸಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಭೇದಿಸುವ ಸಲುವಾಗಿ ಜೆಇಐ ಸದಸ್ಯರು ಹಾಗೂ ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಲಾಗಿದೆಯಂತೆ.
ಪುಲ್ವಾಮಾ ಜಿಲ್ಲೆಯ ಸಂಬೂರ್ ಪ್ರದೇಶ, ಮಲಂಗಾಪೋರಾ, ಕೊಯಿಲ್, ಚಂದ್ ಗಮ್, ಕಾಶ್ಮೀರದ ಶೋಪಿಯಾನ್, ಕುಲ್ಗಾಮ್, ಪುಲ್ವಾಮಾ ಜಿಲ್ಲೆಗಳ 8 ಕಡೆ ಶೋಧ ಕಾರ್ಯ ನಡೆದಿದೆ. ಶೋಪಿಯಾನ್ ದಲ್ಲಿರುವ ಮೌಲ್ವಿ ಇರ್ಫಾನ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಇತ ಫರೀದಾಬಾದ್ ನ ಅಲ್ ಫಲಾಹ್ ವಿಶ್ವವಿದ್ಯಾಲಯದ ವೈಟ್ ಕಾಲರ್ ಭೋತ್ಪಾದನೆ ಜಾಲದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ.




