Ad imageAd image

ಎಪಿಎಂಸಿ ಮಳಿಗೆಗಳನ್ನು ನಿಯಮಾನುಸಾರ ಹರಾಜಿಗೆ ಆಗ್ರಹ

Nagesh Talawar
ಎಪಿಎಂಸಿ ಮಳಿಗೆಗಳನ್ನು ನಿಯಮಾನುಸಾರ ಹರಾಜಿಗೆ ಆಗ್ರಹ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೆ.ಆರ್.ಪೇಟೆ(KR Pete): ಎಪಿಎಂಸಿ ವಾಣಿಜ್ಯ ಬಳಗೆಗಳನ್ನು ಬಲಾಡ್ಯರು ಹಲವಾರು ವರ್ಷಗಳಿಂದ ಇಲಾಖೆಯ ನಿಯಮ ಮೀರಿ ಹರಾಜು ಪ್ರಕ್ರಿಯೆ ನಡೆಸಿಕೊಂಡು ಬಂದಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಲವು ಬಾರಿ ಮನವಿ ಮಾಡಿದರು ಕೂಡ ಬಹಿರಂಗ ಹರಾಜು ಮಾಡದೆ, ಬಾಡಿಗೆ ವಸೂಲಾತಿ ಆಗದೇ ಇಲಾಖೆಗೆ ಸರಿಯಾದ ಆದಾಯವು ಇಲ್ಲದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್ ವೇಣು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳು ಗೌಪ್ಯವಾಗಿ ಬಾಡಿಗೆ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಿ ಇಲಾಖೆಗೆ ವಂಚಿಸುತ್ತಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಇದಕ್ಕೆ ಉದಾಹರಣೆ  ಡಿಸೆಂಬರ್ 2ರಂದು ನಡೆಯಲಿರುವ ಬಹಿರಂಗ ಹರಾಜು ಪ್ರಕ್ರಿಯೆ ಬಗ್ಗೆ ಯಾರಿಗೂ ಮಾಹಿತಿ ತಿಳಿಯಬಾರದು ಎಂದು ಪ್ರಚಲಿತ ಪ್ರಚಾರ ಮಾಡುವ ರಾಜ್ಯ ಮಟ್ಟ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರಕಟಣೆ ನೀಡದೆ ಬಲಾಡ್ಯರ ಅನುಕೂಲವಾಗುವ ರೀತಿಯಲ್ಲೇ  ಸಂಬಂಧಪಟ್ಟ ಅಧಿಕಾರಿಗಳು ಹರಾಜು ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಾಣಿಜ್ಯ ಮಳಿಗೆಗಳನ್ನು ಅಧಿಕಾರ ವ್ಯಾಪ್ತಿ ಮೀರಿ ಕಾನೂನು ಬಾಹಿರ ಹರಾಜು ಪ್ರಕ್ರಿಯೆಯನ್ನು ನಡೆಸದೇ, ನಿಯಮದ ಪ್ರಕಾರ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕೈಗೊಂಡು ಹಲವು ವರ್ಷಗಳಿಂದ ಬಲಾಢ್ಯರ ಕೈಯಲ್ಲಿ ಇರುವ ಬಳಕೆಗಳನ್ನ ಅರ್ಹ ಫಲಾನುಭವಿಗಳಿಗೂ ಹಾಗೂ  ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಯಮದ ಪ್ರಕಾರ ಹರಾಜು ಪ್ರಕ್ರಿಯೆ ಮಾಹಿತಿಯನ್ನು ಪ್ರತಿ ಒಬ್ಬ ಜನಸಾಮಾನ್ಯರಿಗೂ ತಿಳಿಯುವಂತೆ ಪತ್ರಿಕೆ ಪ್ರಕಟಣೆ ತಿಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ  ಹೋರಾಟದ ಮೂಲಕ ಎಚ್ಚರಿಸಬೇಕಾಗುತ್ತದೆ ಎಂದರು. ಈ ವೇಳೆ ಕರವೇ ಕೆ.ಆರ್.ಪೇಟೆ  ನಗರ ಘಟಕದ ಅಧ್ಯಕ್ಷ ಮದನ್, ಕಸಬಾ ಹೋಬಳಿ ಅಧ್ಯಕ್ಷ ಕೊಮ್ಮೆನಹಳ್ಳಿ ಅನಿಲ್, ಹೊಸಹೊಳಲು ಗೋಪಿ ಸೇರಿದಂತೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article