ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸರ್ಕಾರದಿಂದ ಈಗಾಗ್ಲೇ ಸಿಂದಗಿಯಲ್ಲಿ ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ಹತ್ತಿ ಮಿಲ್ ಇಲ್ಲದ ಕಾರಣ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆಸಲಾಗುತ್ತಿದೆ. ಅದನ್ನು ಸಿಂದಗಿಯಲ್ಲಿಯೇ ಪ್ರಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದಿಂದ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್ ಜುಮನಾಳ ಅವರಿಗೆ ಬುಧವಾರ ಮನವಿ ಸಲ್ಲಿಸಲಾಗಿದೆ.
ಈ ವೇಳೆ ಮಾತನಾಡಿದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಬಸನಗೌಡ ಧರ್ಮಗೊಂಡ, ಸಿಂದಗಿ ತಾಲೂಕಿನ ರೈತರಿಗೆ ಜೇರಟಗಿ ಎಲ್ಲಿದೆ ಅನ್ನೋದು ಸರಿಯಾಗಿ ಗೊತ್ತಿಲ್ಲ. ಇಲ್ಲಿಂದ ಅಲ್ಲಿಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ಸಿಂದಗಿಯಲ್ಲಿ ಹತ್ತಿಯನ್ನು ಖರೀದಿಸಬೇಕು. ಅಲ್ಲಿಗೆ ತೆಗೆದುಕೊಂಡು ಹೋಗುವ ಸಾಗಾಣೆಯ ವೆಚ್ಚವನ್ನು ಅವರೆ ಭರಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಯುವ ಘಟಕದ ರಾಜ್ಯ ಸಂಚಾಲಕ ಸಿದ್ದನಗೌಡ ಜಲಪುರ, ಮಾಜಿ ಸೈನಿಕರು, ಸಾಮಾಜಿಕ ಹೋರಾಟಗಾರ ಶಬ್ಬೀರ್ ಪಟೇಲ್, ದೇವರ ಹಿಪ್ಪರಗಿಯ ಯುವ ರೈತ ಮುಖಂಡ ಪ್ರಭುಗೌಡ ಪಾಟೀಲ, ಯುವ ರೈತ ನಾಯಕ ರಾಜಶೇಖರ ಅಮರಖೇಡ ಉಪಸ್ಥಿತಿರಿದ್ದರು.