Ad imageAd image

ದೇವರ ಹಿಪ್ಪರಗಿ: ಟಿಪ್ಪರ್-ಬೈಕ್ ಅಪಘಾತ, ಸಿಂದಗಿಯ ಯುವಕ ಸಾವು

ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಭೀಕರವಾಗಿ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ  ಭಾನುವಾರ ನಡೆದಿದೆ.

Nagesh Talawar
ದೇವರ ಹಿಪ್ಪರಗಿ: ಟಿಪ್ಪರ್-ಬೈಕ್ ಅಪಘಾತ, ಸಿಂದಗಿಯ ಯುವಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ(Devara Hipparagi): ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಭೀಕರವಾಗಿ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ  ಭಾನುವಾರ ನಡೆದಿದೆ. ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದ ಸಂಗಮೇಶ ಸಾಹೇಬಗೌಡ ಪೋಲೀಸಪಾಟೀಲ(28) ಮೃತ ದುರ್ದೈವಿ. ಇನ್ನೋರ್ವ ಸವಾರ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಭವಾನಿ ಬಾಂಡೆ ಅಂಗಡಿ ಹತ್ತಿರ ಈ ಭೀಕರ ಅಪಘಾತ ಸಂಭವಿಸಿದೆ.

ಇವರು ವಿಜಯಪುರ ಸಮೀಪದ ಕನಮಡಿ ದೇವಸ್ಥಾನಕ್ಕೆ ಹೋಗಿ ಬರುವಾಗ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಹಾಗೂ ಓವರ್ ಟೇಕ್ ಮಾಡಲು ಹೋಗಿ ಬೈಕ್ ಗೆ ಗುದ್ದಿದ್ದಾನಂತೆ. ಇದರಿಂದಾಗಿ ಬೈಕ್ ಸವಾರ ಸಂಗಮೇಶ ಮುಂದಿನ ಎಡಗಡೆ ಚಕ್ರಕ್ಕೆ ಸಿಲುಕಿದ್ದಾನೆ. ಆತನ ತಲೆ ಮೇಲೆಯೇ ಗಾಲಿ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article