ಪ್ರಜಾಸ್ತ್ರ ಸುದ್ದಿ
ಜೂನಿಯರ್ ಎನ್ ಟಿಆರ್(Junior NTR) ನಟನೆಯ ಬಹುನಿರೀಕ್ಷಿತ ದೇವರ ಸಿನಿಮಾ ಶುಕ್ರವಾರ ಎಲ್ಲೆಡೆ ಬಿಡುಗಡೆಯಾಗಿದೆ. ಅಭಿಮಾನಿಗಳು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದರ ನಡುವೆ ಕೆಲವು ಕಡೆ ಗಲಾಟೆಗಳು ನಡೆದು ಶೋ ರದ್ದುಗೊಳಿಸಲಾಗಿದೆ. ಇನ್ನೊಂದು ಕಡೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಟೌಟ್ ಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ. ಇದರಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಟ ಜೂನಿಯರ್ ಎನ್ ಟಿಆರ್ ಗೆ ನಟಿ ಜಾನ್ವಿ(Janhvi Kapoor) ಕಪೂರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಟಾಲ ಶಿವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 6 ವರ್ಷಗಳ ಬಳಿಕ ಸೋಲೋ ಹೀರೋ ಆಗಿ ನಟಿಸಿದ ಸಿನಿಮಾ ಬಿಡುಗಡೆಯಾಗಿದೆ. ಇದರಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದು, ಫ್ಯಾನ್ಸ್ ಅಬ್ಬರ ಜೋರಾಗಿದೆ.