ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್ ಸಿನಿಮಾ ಗುರುವಾರ ಬಿಡುಗಡೆಯಾಗಿದೆ. ಬಹುತೇಕ ಕಡೆ ಮುಂಜಾನೆ 6.30ರಿಂದಲೇ ಸಿನಿಮಾ ತೆರೆ ಕಂಡಿದೆ. ದರ್ಶನ್ ಅಭಿಮಾನಿಗಳು ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ. ಡಿ ಬಸ್ ಜೈಲಿನಲ್ಲಿದ್ದರೂ ನಾವು ಬಿಟ್ಟು ಕೊಡುವುದಿಲ್ಲ ಅಂತಿದ್ದಾರೆ.
ದರ್ಶನ್ ಜೈಲು ಪಾಲು, ಸಿನಿಮಾ ಬಿಡುಗಡೆ: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದರ ನಡುವೆ ಅವರ ದಿ ಡೆವಿಲ್ ಸಿನಿಮಾ ಬಿಡುಗಡೆಯಾಗಿದೆ. 2011ರಲ್ಲಿ ಕೌಟುಂಬಿಕ ಕಲಹದ ಕಾರಣಕ್ಕೆ ಜೈಲು ಸೇರಿದ್ದರು. ಆಗ ಸಾರಥಿ ಸಿನಿಮಾ ಬಿಡುಗಡೆಯಾಗಿದೆ ಸೂಪರ್ ಹಿಟ್ ಆಗಿತ್ತು. ಓರ್ವ ಸ್ಟಾರ್ ನಟ ಜೈಲಿನಲ್ಲಿರುವಾಗ ಆತನ ಸಿನಿಮಾಗಳು ಬಿಡುಗಡೆಯಾದ ಇತಿಹಾಸವಿಲ್ಲ. ಆದರೆ ದರ್ಶನ್ ಕರಿಯರ್ ನಲ್ಲಿ ಇದು ದಾಖಲಾಗಿದೆ.
ಪ್ರಕಾಶ್ ವೀರ್ ನಿರ್ದೇಶನ ಮಾಡಿರುವ ದಿ ಡೆವಿಲ್ ಸಿನಿಮಾ ಪಕ್ಕಾ ಮಾಸ್ ಆಗಿದೆ. ನಟಿ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಶೈನ್ ಶೆಟ್ಟಿ, ಗಿಲ್ಲಿ ನಟ, ಶೋಭರಾಜ್, ಹುಲಿ ಕಾರ್ತಿಕ್ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ.




