ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಸುಮಾರು ನಾಲ್ಕೈದು ತಿಂಗಳ ಕಾಲ ಜೈಲಿನಲ್ಲಿ ಕಳೆದು, ಜಾಮೀನು(Bail) ಮೇಲೆ ಹೊರಗೆ ಬಂದಿದ್ದಾರೆ. ಹೀಗಾಗಿ ಕಳೆದ 9 ತಿಂಗಳಿನಿಂದ ನಿಂತು ಹೋಗಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗುತ್ತಿದೆ. ಹೀಗಾಗಿ ಇಂದು ನಟ ದರ್ಶನ್ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಮರಳಿ ತಮ್ಮ ಕಲಾ ಸೇವೆಗೆ ಸಜ್ಜಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಾಕಷ್ಟು ಖುಷಿಯಾಗಿದೆ.
ಸುಪ್ರೀಂ ಕೋರ್ಟ್ ಈಗಾಗ್ಲೇ ದೇಶ್ಯಾದ್ಯಂತ ಸಂಚರಿಸಲು ಅನುಮತಿ ನೀಡಿದೆ. ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಶೂಟಿಂಗ್ ಗೆ ಮರಳಿದ್ದು, ಬಹುನಿರೀಕ್ಷಿತ ಡೆವಿಲ್ ಚಿತ್ರದ ಶೂಟಿಂಗ್(Shooting) ಇಲ್ಲಿ ಮಾರ್ಚ್ 15ರ ತನಕ ನಡೆಯಲಿದೆ. ಈ ವೇಳೆ ಅವರಿಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಮಿಲನ ಪ್ರಕಾಶ್ ಡೆವಿಲ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ದರ್ಶನ್ ಹುಟ್ಟು ಹಬ್ಬದ ದಿನ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಈಗ ಚಿತ್ರೀಕರಣ ಶುರುವಾಗಿದ್ದು, ಡಿ ಬಾಸ್(D Boss) ಅಭಿಮಾನಿಗಳಿಗೆ ಖುಷಿಯಾಗಿದೆ.