ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಹೇಳಿ, ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸಲಾಗುತ್ತಿದೆ. ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆಸಲಾಗುತ್ತಿದೆ. ಹೋರಾಟಗಾರರ ತಾಳ್ಮೆಯ ಕಟ್ಟೆ ಒಡೆದಿದೆ. ಚಿಕ್ಕೋಡಿ ಜಿಲ್ಲೆ ಎಂದು ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಚಂದ್ರಶೇಖರ ಅರಭಾವಿ ಅವರು ಹೇಳಿದರು.
ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಬಹುವರ್ಷಗಳ ಬೇಡಿಕೆಯಾದ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರ ಎಂದರು. ಈ ವೇಳೆ ಸಮಿತಿ ಅಧ್ಯಕ್ಷ ಸಂಜು ಬಡಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಸಂತೋಷ ಪೂಜೇರಿ, ಪ್ರತಾಪಗೌಡ ಪಾಟೀಲ, ಅನಿಲ ನಾವಿ, ಅಮೂಲ ನಾವಿ, ಅಪ್ಪಾಸಾಹೇಬ ಹಿರೇಕೋಡಿ, ರಮೇಶ ಪಾಟೀಲ, ಮೋಹನ ಪಾಟೀಲ, ಶಂಕರ ಅವಡಖಾನ, ಸರದಾರ ಪಾಟೀಲ, ಮಹಾವೀರ ಬಿಲ್ಲೂರೆ, ಸುನಿಲ್ ತೇರದಾಳ, ಮಲ್ಲಪ್ಪ ಡೋನವಾಡೆ, ಚಿದಾನಂದ ಶಿರೋಳೆ, ಕೇದಾರಿ ಬರ್ಗೆ, ಖಾನಪ್ಪ ಬಾಡ, ಶಿವಲಂಗ ವಗ್ಗೆ, ಭೀಮಾ ಶಿರಗಾವೆ, ರಫೀಕ ಪಠಾಣ, ಕೃಷ್ಣಾ ಶಿಂದೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.




