Ad imageAd image

ಧರ್ಮಸ್ಥಳ: ತನಿಖೆ ಶುರು ಮಾಡಿದ ಎಸ್ಐಟಿ

Nagesh Talawar
ಧರ್ಮಸ್ಥಳ: ತನಿಖೆ ಶುರು ಮಾಡಿದ ಎಸ್ಐಟಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಧರ್ಮಸ್ಥಳ(Dharmasthala): ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ಹೇಳಿ ದೂರು ನೀಡಿದ ಪ್ರಕರಣ ದೊಡ್ಡ ಸಂಚಲನ ಮೂಡಿಸಿದೆ. ಧರ್ಮಸ್ಥಳದಲ್ಲಿ ಅತ್ಯಾಚಾರ, ಅನ್ಯಾಯ, ಕೊಲೆ ಸೇರಿದಂತೆ ಸಾಕಷ್ಟು ಅಪರಾಧಿಕ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಸತ್ಯವನ್ನು ತಿಳಿದುಕೊಳ್ಳಲು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅದು ಇಂದಿನಿಂದ(ಶನಿವಾರ) ತನಿಖೆ ಶುರು ಮಾಡಿದೆ.

ಎಸ್ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಹತ್ತಿರ ನೂತನ ಪೊಲೀಸ್ ವಸತಿ ನಿಲಯದಲ್ಲಿ ಕಚೇರಿ ಪ್ರಾರಂಭಿಸಿ, ತನಿಖೆ ಶುರು ಮಾಡಿದೆ. ಸಾಕಷ್ಟು ಸದ್ದು ಗದ್ದಲಕ್ಕೆ ಕಾರಣವಾಗಿರುವ ನೂರಾರು ಶವಗಳ ಕಥೆಯ ಹಿಂದಿನ ಸತ್ಯ ಬಯಲಾಗಬೇಕಿದೆ.

WhatsApp Group Join Now
Telegram Group Join Now
Share This Article