ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ನಡೆದಿವೆ ಎನ್ನಲಾಗುತ್ತಿರುವ ಅಪರಾಧಿಕ ಕೃತ್ಯಗಳಿಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರಿತಿಸದ ಜಾಗಕ್ಕೆ ಬುಧವಾರ ಕರೆದುಕೊಂಡು ಹೋಗಿದ್ದಾನೆ. ಈಗಾಗ್ಲೇ ಗುರುತಿಸಿದ 13 ಸ್ಥಳಗಳನ್ನು ಬಿಟ್ಟು ಬೇರೆ ಕಡೆ ಕರೆದುಕೊಂಡು ಹೋಗಿದ್ದಾನೆ. ನೇತ್ರಾವತಿ ಸ್ನಾನ ಘಟ್ಟದ ಹೆದ್ದಾರಿ ಹತ್ತಿರದ ಕಾಡಿನೊಳಗೆ ಶೋಧ ಕಾರ್ಯ ನಡೆಸಿತು. ಸೋಮವಾರ ತೋರಿಸಿದ್ದ ಬೇರೆ ಜಾಗದಲ್ಲೂ ಶೋಧ ನಡೆಯಿತು.
ಎಸ್ಐಟಿ ತಂಡವನ್ನು 12ನೇ ಸ್ಥಳದಿಂದ ಕಾಡಿನೊಳಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತೊಂದು ಜಾಗ ತೋರಿಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗುರುತಿಸಿದ 13 ಜಾಗಗಳಲ್ಲಿ 6ನೇ ಜಾಗದಲ್ಲಿ ಮೃತದೇಹದ ಮೂಳೆಗಳು ಸಿಕ್ಕಿವೆ. ಮತ್ತೊಂದು ಜಾಗದಲ್ಲಿ ತಲೆ ಬುರುಡೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿವೆ. ಉಳಿದ ಕಡೆ ಯಾವುದೇ ಕುರುಹು ಪತ್ತೆಯಾಗಿಲ್ಲ.