ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ. ನನ್ನ ಕೈಯಿಂದಲೇ ಶವಗಳನ್ನು ಹೂಳಿಸಲಾಗಿದೆ ಎಂದು ಹೇಳಿದ್ದ ಸಾಕ್ಷಿ ದೂರುದಾರನ ಹೆಸರು ಬಹಿರಂಗವಾಗಿದೆ. ಇಷ್ಟು ದಿನ ಭೀಮ, ಮಾಸ್ಕ್ ಮ್ಯಾನ್ ಎಂದೆಲ್ಲ ಹೇಳುತ್ತಿದ್ದ ವ್ಯಕ್ತಿಯ ಹೆಸರು ಸಿ.ಎನ್ ಚಿನ್ನಯ್ಯ ಎಂದು ತಿಳಿದು ಬಂದಿದೆ. ಸುಳ್ಳು ಮಾಹಿತಿ ಅಡಿಯಲ್ಲಿ ಇದೀಗ ಆತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಇಷ್ಟು ದಿನಗಳ ಎಸ್ಐಟಿ ಆತ ತೋರಿಸಿದ್ದ 13 ಜಾಗಗಳಲ್ಲಿ ಶೋಧ ನಡೆಸಿತ್ತು. ಆತ ಹೇಳಿದ ಪ್ರಮಾಣದಲ್ಲಿ ಶವಗಳ ಕುರುಹು ಸಿಗಲಿಲ್ಲ. ಎರಡ್ಮೂರು ಜಾಗದಲ್ಲಿ ಮನುಷ್ಯನ ಅಸ್ಥಿಪಂಜರ, ತಲೆ ಬುರುಡೆ, ಕೆಲವು ಎಲಬುಗಳು ಪತ್ತೆಯಾಗಿದ್ದು, ಬಿಟ್ಟರೆ ಏನೂ ಸಿಗಲಿಲ್ಲ. ಶುಕ್ರವಾರ ಮುಂಜಾನೆಯಿಂದ ಶನಿವಾರ ಮುಂಜಾನೆಯ ತನಕ ವಿಚಾರಣೆ ನಡೆಸಲಾಗಿದ್ದು, ಆರೋಪಿ ಸುಳ್ಳು ಹೇಳಿದ್ದಾನೆ ಎನ್ನಲಾಗುತ್ತಿದೆ.