ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmstala): ಧರ್ಮಸ್ಥಳದ ಮೂಲದ ಯುವತಿ ಪಂಜಾಬ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಇಲ್ಲಿನ ಬೊಳಿಯಾರು ಮೂಲದ ಗುತ್ತಿಗೆದಾರ ಸುರೇಂದ್ರ ಹಾಗೂ ಸಿಂಧೂದೇವಿ ಎಂಬುವರ ಪುತ್ರಿ ಆಕಾಂಕ್ಷ(22) ಮೇ 17ರಂದು ನಿಗೂಢವಾಗಿ ಮೃತಪಟ್ಟಿದ್ದಾಳೆ. ಪಂಜಾಬ್ ನ ಎಲ್ ಪಿಯು ಪಗ್ವಾಡ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಳು.
ಕಳೆದ 6 ತಿಂಗಳಿಂದ ದೆಹಲಿಯ ಜೆಟ್ ಏರೊಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಜಪಾನಿಗೆ ಹೋಗಲು ಸಿದ್ಧತೆ ನಡೆಸಿದ್ದ ಆಕಾಂಕ್ಷ ಕಾಲೇಜಿನಲ್ಲಿ ಪ್ರಮಾಣ ಪತ್ರ ತರಲು ಸ್ನೇಹಿತನ ಜೊತೆಗೆ ಶನಿವಾರ ಅಲ್ಲಿಗೆ ಹೋಗಿದ್ದಳು. ಕುಟುಂಬಸ್ಥರೊಂದಿಗೆ ಮಾತನಾಡಿದ್ದಳಂತೆ. ಇದಾದ ಕೆಲವು ಕ್ಷಣಗಳಲ್ಲೇ ಕಾಲೇಜಿನ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.