ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ದಶಕಗಳ ಕಾಲ ಇಲ್ಲಿ ಅಪರಾಧಿ ಕೃತ್ಯಗಳು ನಡೆದಿವೆ ಎಂದು ಹೇಳಿರುವ ಪ್ರಕರಣ ಸಂಬಂಧ ಸಾಕ್ಷಿ ದೂರುದಾರ ತೋರಿಸಿರುವ 6ನೇ ಜಾಗದಲ್ಲಿ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೂರನೇ ದಿನವಾದ ಗುರುವಾರ ನೇತ್ರಾವತಿ ನದಿ ಪಕ್ಕದಲ್ಲಿನ ಕಾಡಿನಲ್ಲಿ ತೋರಿಸಿದ ಜಾಗದಲ್ಲಿ ಅಗೆಯಲಾಗಿದ್ದು, ಅಲ್ಲಿ ಗಂಡಸಿನ ಮೃತದೇಹದ ಕುರುಹುಗಳು ಪತ್ತೆಯಾಗಿವೆ ಎಂದು ಎಸ್ಐಟಿ ಮೂಲಗಳಿಂದ ತಿಳಿದು ಬಂದಿದೆ.
ಶೋಧ ನಡೆಯುತ್ತಿರುವ ಸ್ಥಳದಲ್ಲಿ ವಿಧಿ ವಿಜ್ಞಾನ ತಜ್ಞರ ತಂಡವಿದೆ. ಪತ್ತೆಯಾಗಿರುವ ಕುರುಹುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ನೂರಾರು ಸಾವುಗಳು ನಡೆದಿದ್ದು, ಅವುಗಳನ್ನು ಹೂತು ಹಾಕಲು ನನ್ನನ್ನು ಬಲವಂತ ಮಾಡಲಾಗಿದೆ ಎಂದು ಇಲ್ಲಿ ಮಾಜಿ ನೈರ್ಮಲ್ಯ ಕಾರ್ಮಿಕ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸರ್ಕಾರ ಎಸ್ಐಟಿ ರಚನೆ ಮಾಡಿದೆ.