Ad imageAd image

ಧಾರವಾಡ: ಟ್ರ್ಯಾಕ್ಟರ್ ಪಲ್ಟಿ, ಓರ್ವ ಸಾವು.. ಇಬ್ಬರು ಪಾರು

Nagesh Talawar
ಧಾರವಾಡ: ಟ್ರ್ಯಾಕ್ಟರ್ ಪಲ್ಟಿ, ಓರ್ವ ಸಾವು.. ಇಬ್ಬರು ಪಾರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಧಾರವಾಡ(Dharwad): ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, ಇಬ್ಬರು ಪಾರಾದ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಹಂಚಿನಾಳ-ದೇವನೂರ ಗ್ರಾಮದ ನಡುವಿನ ಹಳ್ಳದಲ್ಲಿ ಕಳೆದ ರಾತ್ರಿ ನಡೆದಿದೆ. ಶಿವಯ್ಯ ವಾಟ್ನಾಳಮಠ(29) ಮೃತಪಟ್ಟ ಯುವಕನಾಗಿದ್ದಾನೆ. ಹೊಲ ಬಿತ್ತನೆ ಹಿನ್ನಲೆಯಲ್ಲಿ ಕೂರಿಗೆ ತೆಗೆದುಕೊಂಡು ಹೊರಟಿದ್ದಾಗ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಈ ಅನಾಹುತ ನಡೆದಿದೆ.

ಮಲ್ಲಿಕಾರ್ಜುನ, ವಾಸುದೇವ ಹೈಭತ್ತಿ ಎಂಬುವರು ಇಬ್ಬರು ಪಾರಾಗಿದ್ದಾರೆ. ಈ ಭಾಗದ ಬೆಣ್ಣೆ ಹಳ್ಳ, ತುಪ್ಪರಿಹಳ್ಳ ಸೇರಿದಂತೆ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

WhatsApp Group Join Now
Telegram Group Join Now
Share This Article