ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಸ್ನೇಹ ಬೆಳೆಸಿದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಇದೀಗ ಸಂಕಷ್ಟ ಎದುರಿಸುತ್ತಿದ್ದಾರೆ. ಚಿನ್ನದ ವ್ಯಾಪಾರಿಗೆ 2.42 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಶ್ವೇತಾಗೌಡ ಎನ್ನುವ ಮಹಿಳೆಯೊಂದಿಗೆ ವರ್ತೂರ್ ಪ್ರಕಾಶ್ ಎಂಗೇಜ್ ಮೆಂಟ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾದ ಪ್ರಕಾಶ್, ಎಸಿಪಿ ಗೀತಾ ತಂಡದ ವಿಚಾರಣೆಯನ್ನು ಎದುರಿಸಿದ್ದಾರೆ. ಆರೋಪಿ ಶ್ವೇತಾಗೌಡ ಕೊಟ್ಟಿದ್ದ ನಗದು ರೂಪದ ಉಡುಗರೆ, ಚಿನ್ನಾಭರಣ, ಉಂಗುರ ಎಲ್ಲವನ್ನೂ ಪೊಲೀಸರಿಗೆ ಹಿಂದುಗಿರಿಸಿದ್ದಾರೆ. ಇವರಿಬ್ಬರ ನಡುವೆ ಆತ್ಮೀಯತೆ ಇತ್ತು ಎನ್ನುವುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆಯಂತೆ. ಸಾಕಷ್ಟು ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ತಿರುಪತಿಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರಂತೆ. ಶ್ವೇತಾ ಮೊಬೈಲ್ ನಲ್ಲಿ ಹಲವು ಫೋಟೋಗಳು ಪತ್ತೆಯಾಗಿವೆ.
ಆಕೆ ನನ್ನ ಸ್ನೇಹಿತೆ ಅಲ್ಲ. ಐದಾರು ತಿಂಗಳ ಹಿಂದೆ ಪರಿಚಯವಾಗಿದ್ದಾಳೆ. ನನ್ನ ಹೆಸರು ಬಳಸಿಕೊಂಡು ಚಿನ್ನಾಭರಣ ಖರೀದಿ ಮಾಡಿದ್ದಾಳೆ. ಅವರು ಅದ್ಹೇಗೆ 2 ಕೋಟಿ ರೂಪಾಯಿ ಚಿನ್ನಾಭರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಹಲವು ಮಾಹಿತಿ ಕೊಟ್ಟಿದ್ದೇನೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ. ವರ್ತೂರು ಪ್ರಕಾಶ್ ಜೊತೆಗೆ ಶ್ವೇತಾಗೌಡ ನಮ್ಮ ಅಂಗಡಿಗೆ ಬಂದಿದ್ದರು ಎಂದು ದೂರುದಾರ ಸಂಜಯ್ ಭಾಪ್ನಾ ಹೇಳುತ್ತಿದ್ದಾರೆ. ಪ್ರಕಾಶ್ ಮನೆ ಬಳಿಯೂ ಡೆಲಿವರಿ ಕೊಟ್ಟಿದ್ದೇವೆ. ಮೊದಲು ಪಡೆದ ಚಿನ್ನಕ್ಕೆ ದುಡ್ಡು ಕೊಟ್ಟಿದ್ದರು. ನಂತರ 2 ಕೆಜಿ 900 ಗ್ರಾಂ ಚಿನ್ನಾಭರಣದ ಹಣ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಹೆಣ್ಣಿನ ಮೋಹಕ್ಕೆ ಬಿದ್ದ ವರ್ತೂರ್ ಪ್ರಕಾಶ್ ತಮ್ಮ ರಾಜಕೀಯ ಬದುಕಿಗೆ ಸಂಚು ತೊಂದುಕೊಂಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.