ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತೆ. ಸಿಎಂ ಸಿದ್ದರಾಮಯ್ಯ ನಂತರ ಅಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬರುತ್ತಾರೆ ಅನ್ನೋದು ಬಿಜೆಪಿಯವರ ಮಾತುಗಳು. ಡಿಕೆಶಿ ಬದಲು ನಾವೆಲ್ಲ ಇದ್ದೇವೆ ಎನ್ನುವಂತೆ ಕೈ ಪಾಳೆಯದಲ್ಲಿ ನಾಯಕರಲ್ಲಿನ ಒಂದು ಗುಂಪು ಕಸರತ್ತು ನಡೆಸಿದೆ. ಇದೆಲ್ಲದರ ನಡುವೆ ಈಗ ಡಿ.ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆಯ ವದಂತಿ ಶುರುವಾಗಿದೆ. ಕುಂಭಮೇಳಕ್ಕೆ ಹೋಗಿ ಬಂದ ಬಳಿಕ ಡಿ.ಕೆ ಶಿವಕುಮಾರ್ ಅದನ್ನು ಹೊಗಳಿದ್ದರು. ನಾನು ಹಿಂದೂ ಧರ್ಮವನ್ನು ಪಾಲಿಸುತ್ತೇನೆ ಎಂದರು.
ಇನ್ನು ಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಆದಿ ಯೋಗಿ ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸೇರ್ಪಡೆ ವದಂತಿ ಎದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ನಾನು ಈ ಮೊದಲೇ ಮುಹೂರ್ತ ಇಟ್ಟಿದ್ದೆ. ಅದೆಲ್ಲದರ ಪರಿಣಾಮ. ಇದು ಈಗ ಮುನ್ನುಡಿ ಅಷ್ಟೇ ಎನ್ನುವ ಮೂಲಕ ವ್ಯಂಗ್ಯ ಮಿಶ್ರಿತವಾಗಿ ಬಾಂಬ್ ಸಿಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ನವರು ಮೊದಲು ಹೊರಗೆ ಹಾಕಲಿ. ಆಮೇಲೆ ನೋಡೋಣ ಅಂತಾ ಹೇಳಿದ್ದಾರೆ.