ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿರುವ ಸಂಜು ವೆಡ್ಸ್ ಗೀತಾ-2 ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ, ಸಿನಿಮಾದ ನಟಿ ರಚಿತಾ ರಾಮ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಪ್ರಚಾರದ ಭಾಗವಾಗಿ ನಡೆಯುವ ಕಾರ್ಯಕ್ರಮ, ಮಾಧ್ಯಮಗೋಷ್ಠಿ ಸೇರಿದಂತೆ ಎಲ್ಲಿಯೂ ಭಾಗವಹಿಸುತ್ತಿಲ್ಲ. ಈ ಬಗ್ಗೆ ನಿರ್ದೇಶಕ ನಾಗಶೇಖರ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕರು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಮೈಸೂರಲ್ಲಿ ಮಾತನಾಡಿರುವ ನಿರ್ದೇಶಕ ನಾಗಶೇಖರ್, ಇನ್ಮೇಲೆ ನಮ್ಮ ಚಿತ್ರಕ್ಕೆ ನಟಿ ರಚಿತಾ ರಾಮ್ ಅವಶ್ಯಕತೆಯಿಲ್ಲ. ಈಗಾಗ್ಲೇ ಅವರ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ನೀಡಿದ್ದೇವೆ. ಮೂರು ದಿನ ಕಾಲಾವಕಾಶ ಕೇಳಿದ್ದಾರೆ. ಈಗ ಎರಡು ದಿನವಾಗಿದೆ. ಯಾಕೆ ಪ್ರಚಾರಕ್ಕೆ ಬಂದಿಲ್ಲ. ಇದಕ್ಕೆ ಸ್ಪಷ್ಟನೆ ನೀಡಲು ಹೇಳಿ ಎಂದು ಕೇಳಿದ್ದೇವೆ ಅಂತ ತಿಳಿಸಿದರು.
ಸಂಜು ವೆಡ್ಸ್ ಗೀತಾ-1 ಸಿನಿಮಾ ನೋಡಿ ಜನರು ಮೆಚ್ಚಿಕೊಂಡಿದ್ದರು. ಶಿವಣ್ಣನ ಜೊತೆಗೆ ಸಿನಿಮಾ ನೋಡಬೇಕು ಅನ್ನೋ ಆಸೆ ಈಡೇರಿದೆ. ಎಮೋಷನಲ್ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಸಿನಿಮಾ ಎಂದು ಶಿವಣ್ಣ ಹೇಳಿದ್ದಾರೆ. ಜನರೆ ಸಿನಿಮಾ ಗೆಲ್ಲಿಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.