ಕುಣಿಗಲ್ ನಲ್ಲಿ ಭೀಕರ ಹತ್ಯೆ.. ಹಿಟ್ಲರ್ ಸಹ ಇಷ್ಟು ಕ್ರೂರ ಹತ್ಯೆ ಮಾಡಿರಲಿಕ್ಕಿಲ್ಲ!

130

ಪ್ರಜಾಸ್ತ್ರ ಅಪರಾಧ ಸುದ್ದಿ

ಕುಣಿಗಲ್: ಜಗತ್ತಿನಲ್ಲಿಯೇ ಇಷ್ಟೊಂದು ಕ್ರೂರ ಹತ್ಯೆ ಬಹುಶಃ ನಡೆದಿರಲಕ್ಕಿಲ್ಲ ಅನಿಸುತ್ತದೆ. ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಘಟನೆ ಹುಲಿಯೂರುದುರ್ಗದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಪುಷ್ಪಾ(35) ಕೊಲೆಯಾದ ದುರ್ದೈವಿ. ಶಿವರಾಮ ಕೊಲೆ ಮಾಡಿದ ಹಂತಕ ಪತಿ. ಪೊಲೀಸರು ಇತನನ್ನು ವಶಕ್ಕೆ ಪಡೆದಿದ್ದಾರೆ. ಗಂಡ, ಹೆಂಡ್ತಿ ನಡುವೆ ಸೋಮವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಶಿವರಾಮ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಇವನೆಷ್ಟು ಕ್ರೂರಿಯಾಗಿದ್ದಾನೆ ಅಂದರೆ, ಪತ್ನಿಯ ರುಂಡ, ಮುಂಡ ಬೇರೆ ಬೇರೆ ಮಾಡಿದ್ದಾನೆ. ದೇಹದ ಚರ್ಮ ಸುಲಿದಿದ್ದಾನೆ. ದೇಹದ ಅಂಗಾಂಗಳನ್ನು ತುಂಡರಿಸಿದ್ದಾನೆ. ಇದನ್ನು ನೋಡಿದ ಪೊಲೀಸರೇ ಸಹ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ನನ್ನ 25 ವರ್ಷಗಳ ಸೇವೆಯಲ್ಲಿ ಇಂತಹ ಭೀಕರದೊಂದು ಕೊಲೆ ನೋಡಿಲ್ಲವೆಂದು ಅಮೃತೂರು ಠಾಣೆ ಪಿಎಸ್ಐ ಮಾದ್ಯಾ ನಾಯಕ್ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರದ ಪುಷ್ಪ ಹಾಗೂ ಸುಗ್ಗನಹಳ್ಳಿಯ ಶಿವರಾಮ ಪ್ರೀತಿಸಿ ಮದುವೆಯಾಗಿದ್ದರು. ಇವರದು ಅಂತರ್ಜಾತಿ ಮದುವೆ. 8 ವರ್ಷದ ಮಗನಿದ್ದಾನೆ. ಸಾಮಿಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯ ಕೃತ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ.
error: Content is protected !!