ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚುಟುಕು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಐಪಿಎಲ್ 2025ಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಟೂರ್ನಿ ಉದ್ಘಾಟನೆಯಾಗಲಿದೆ. ಈ ವೇಳೆ ಬಾಲಿವುಡ್ ನಟಿ ದಿಶಾ ಪಟಾನಿ ಭರ್ಜರಿ ಡ್ಯಾನ್ಸ್ ಹಾಗೂ ಗಾಯಕಿ ಶ್ರೇಯಾ ಘೋಷಾಲ್ ಗಾಯನದ ಕಿಕ್ ಇರಲಿದೆ. ಈ ಕುರಿತು ಐಪಿಎಲ್ ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಐಪಿಎಲ್ ಟೂರ್ನಿಗೆ 18 ವರ್ಷಗಳು ತುಂಬಿದ್ದು, ತುಂಬಾ ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟನೆಯ ಪ್ಲಾನ್ ಮಾಡಲಾಗಿದೆ. ವೇದಿಕೆ ಬೆಳಗಿಸಲು ದಿಶಾ ಪಟಾನಿಗಿಂತ ಉತ್ತಮರು ಯಾರು ಎನ್ನುವ ಸಾಲುಗಳನ್ನು ಬರೆಯಲಾಗಿದೆ. ಇದನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಲಾಗಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಕೊಲ್ಕತ್ತಾದಲ್ಲಿ ಮುಖಾಮುಖಿಯಾಗಲಿವೆ.