ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಬಬಲೇಶ್ವರ ತಾಲೂಕಿನ ಕುಮಟೆ ಗ್ರಾಮದ ನಿವಾಸಿ ಅಪ್ಪಾಸಾಬ್ ನಾಗಪ್ಪ ಸಾರವಾಡ ಎಂಬುವರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆತನ ಕುಟುಂಸ್ಥರಿಗೆ ಸಾಂತ್ವಾನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ ಪಾಟೀಲ, ಹೆಸ್ಕಾಂ ಪರವಾಗಿ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದೆ.
ಅಪ್ಪಾಸಾಬ್ ಪತ್ನಿ ಕಾವೇರಿಯವರಿಗೆ ಸಚಿವರು ಪರಿಹಾರದ ಚೆಕ್ ನೀಡಿ ಒಂದಿಷ್ಟು ಆರ್ಥಿಕ ನೆರವು ನೀಡಿದ್ದು, ನಿಧನದ ದುಃಖವನ್ನು ಯಾವ ಪರಿಹಾರವೂ ತುಂಬಲಾರದು. ಈ ಸಹಾಯ ಆ ಕುಟುಂಬಕ್ಕೆ ತುಸು ನೆರವಾಗಲಿ ಎಂಬ ಭಾವನೆ ನಮ್ಮದು ಎಂದಿದ್ದಾರೆ.




