Ad imageAd image

ನವೆಂಬರ್ 22ರಂದು ಜಿಲ್ಲಾಮಟ್ಟದ ಯುವಜನೋತ್ಸವ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಿಎಲ್‍ಡಿಇ, ಎಎಸ್ ಪಿ ಕಾಮರ್ಸ್ ಕಾಲೇಜ್, ನೆಹರು ಯುವ ಕೇಂದ್ರ,

Nagesh Talawar
ನವೆಂಬರ್ 22ರಂದು ಜಿಲ್ಲಾಮಟ್ಟದ ಯುವಜನೋತ್ಸವ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಿಎಲ್‍ಡಿಇ, ಎಎಸ್ ಪಿ ಕಾಮರ್ಸ್ ಕಾಲೇಜ್, ನೆಹರು ಯುವ ಕೇಂದ್ರ, ಎನ್ಎಸ್ಎಸ್ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 22ರಂದು ನಗರದ ಎಎಸ್ ಪಿ ಕಾಮರ್ಸ್ ಕಾಲೇಜ್, ಬಿಎಲ್‌ಡಿಇ ನ್ಯೂಕ್ಯಾಂಪಸ್ ನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಯುವ ಜನೋತ್ಸವದಲ್ಲಿ ಜಾನಪದ ನೃತ್ಯ ಹಾಗೂ ಜಾನಪದ ಗೀತೆ, ಗುಂಪು ಹಾಗೂ ವೈಯಕ್ತಿಕ, ಗುಂಪು ಗಾಯನ ಸ್ಪರ್ಧೆಗಳು, ವೈಯಕ್ತಿಕ ಸ್ಪರ್ಧೆಗಳಾದ ಕವಿತೆ ಬರೆಯುವುದು, ಚಿತ್ರಕಲೆ, ಗುಡಿಕೈಗಾರಿಕೆಯ ಕಲಾ ಪ್ರಕಾರ, ಕೃಷಿ ಉತ್ಪನ್ನ, ಜವಳಿ, ಕಥೆ ಬರೆಯುವ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು 15 ರಿಂದ 29 ವರ್ಷ ಒಳಗಿನ ಯುವಕ ಯುವತಿಯರು ನವೆಂಬರ್ 20, 2024ರ ಒಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ವಿಜಯಪುರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ 08352-251085 ಹಾಗೂ ಮೊಬೈಲ್ ಸಂಖ್ಯೆ 8792185141 ನಂಬರ್ ಗೆ ಸಂಪರ್ಕಿಸಲು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article