Ad imageAd image

ಸಿಂದಗಿಗೆ ಜಿಲ್ಲಾ ಸತ್ರ ನ್ಯಾಯಾಲಯ, ಅಭಿನಂದನಾ ಸಮಾರಂಭ

Nagesh Talawar
ಸಿಂದಗಿಗೆ ಜಿಲ್ಲಾ ಸತ್ರ ನ್ಯಾಯಾಲಯ, ಅಭಿನಂದನಾ ಸಮಾರಂಭ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸಿಂದಗಿ ತಾಲೂಕಿಗೆ ಮತ್ತೊಂದು ಗರಿಮೆ ಎಂಬಂತೆ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಸಿಂದಗಿಗೆ ಉಚ್ಛ ನ್ಯಾಯಾಲಯ ನೀಡಿದೆ. ಇದಕ್ಕೆ ಕಾರಣರಾದ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಬಿ ಪಾಟೀಲ ಅವರು ಸೇರಿದಂತೆ ಸರ್ವಪದಾಧಿಕಾರಿಗಳು, ಸದಸ್ಯರು ಕಾರಣರಾಗಿದ್ದು, ಶೀಘ್ರದಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗುವುದು ಎಂದು ಹಿರಿಯ ವಕೀಲರಾದ ಎಂ.ಎಸ್ ಪಾಟೀಲ ಅವರು ಹೇಳಿದ್ದಾರೆ. ಶನಿವಾರ ಬಾರ್ ಕೌನ್ಸಿಲ್ ಕಾರ್ಯಾಲಯದಲ್ಲಿ ಮಾತನಾಡಿ ಈ ರೀತಿ ಹೇಳಿದರು.

ವಿಜಯಪುರ ನ್ಯಾಯಾಲಯದ ನ್ಯಾಯಾಧೀಶರು, ಸಿಂದಗಿ ನ್ಯಾಯಾಲಯ ನ್ಯಾಯಾಧೀಶರು, ಆಡಳಿತ ವರ್ಗ ಇವರ ಪ್ರಯತ್ನದ ಫಲವಾಗಿ ನಮ್ಮ ನ್ಯಾಯಾಲಯಕ್ಕೆ ಹೆಚ್ಚುವರಿ 6ನೇ ಜಿಲ್ಲಾ ಸತ್ರ ನ್ಯಾಯಾಲಯ ಆಗಿದ್ದು, ಇಡೀ ವಕೀಲರಿಗೂ, ಸಿಂದಗಿ ತಾಲೂಕಿನ ಜನತೆಗೆ ಹರ್ಷ ತಂದಿದೆ. ಇದರಿಂದ ವಕೀಲರಿಗೆ, ಕಕ್ಷಿದಾರರಿಗೆ ಅನುಕೂಲವಾಗಲಿದೆ. ಜನವರಿ 3ರ ತನಕ ನ್ಯಾಯಾಲಯಕ್ಕೆ ರಜೆ ಇದ್ದು, ಇದಾದ ಬಳಿಕ ಪೂರ್ವಭಾವಿ ಸಭೆ ಕರೆದು ಅಭಿನಂದನಾ ಸಮಾರಂಭದ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು ಎಂದರು. ಹಿರಿಯ ವಕೀಲರಾದ ಎಂ.ಕೆ ಪತ್ತಾರ ಅವರು ಮಾತನಾಡಿ, ಜಿಲ್ಲಾ ನ್ಯಾಯಾಲಯಕ್ಕಾಗಿ ವಕೀಲರ ಸಂಘದಿಂದ ಸಾಕಷ್ಟು ಹೋರಾಟ ಮಾಡಿದ್ದು, ಈಗ ಎಸ್.ಬಿ ಪಾಟೀಲರ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ನ್ಯಾಯಾಲಯ ತರುವಲ್ಲಿ ಸತತ ಪ್ರಯತ್ನ ಮಾಡಿದ್ದಾರೆ. ನಮಗೆ ಜಿಲ್ಲಾ ನ್ಯಾಯಾಲಯ ಬಹಳ ಅವಶ್ಯಕತೆ ಇತ್ತು. ಇದು ನಮ್ಮೆಲ್ಲರಿಗೂ ಸಂತಸ ತಂದಿದೆ. ಇದರಿಂದ ನಮಗೆ ತುಂಬಾ ಅನುಕೂಲವಾಗಲಿದೆ ಎಂದರು.

ಇನ್ನೋರ್ವ ಹಿರಿಯ ವಕೀಲರಾದ ಪಿ.ವಿ ದೇಶಪಾಂಡೆ ಅವರು ಮಾತನಾಡಿ, ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಧೀಶರು ನಮ್ಮ ಸಿಂದಗಿಗೆ ಜಿಲ್ಲಾ ಸತ್ರ ನ್ಯಾಯಾಲಯ ಒದಗಿಸಿಕೊಟ್ಟಿದ್ದಾರೆ. ಇದಕ್ಕೆ ಕಾರಣಿಭೂತರಾದ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಬಿ ಪಾಟೀಲರು. ಅವಿರತವಾಗಿ ಪ್ರಯತ್ನ, ಸರ್ಕಾರದ ಜೊತೆಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಸತ್ರ ನ್ಯಾಯಾಲಯ ತರುವಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಅಂತಾ ಹೇಳಿದರು. ಈ ವೇಳೆ ವಕೀಲರಾದ ಎಂ.ಎನ್ ನಾಯ್ಕೋಡಿ ಅವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article