ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಚಾರ ಸಂಬಂಧ ಮಾಜಿ ಸಿಎಂ ವೀರಪ್ಪ ಮೊಯ್ಲಿ(Veerappa Moily) ನೀಡಿರುವ ಹೇಳಿಕೆ ಹೊಸ ಸ್ವರೂಪ ಪಡೆಯುತ್ತಿದ್ದಂತೆ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಸಿದ್ದರಾಮಯ್ಯನವರನ್ನು ಬದಲಾಯಿಸಿ ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದಿಲ್ಲ. ಇವತ್ತಲ್ಲ ನಾಳೆ ನೀವು ಸಿಎಂ ಆಗುತ್ತೀರಿ. ಇದನ್ನು ಸಾರ್ವಜನಿಕವಾಗಿ ಚರ್ಚಿಸುವುದು ತಪ್ಪು ಎಂದು ಕರ್ಕಾಳದಲ್ಲಿನ ಕಾರ್ಯಕ್ರಮದಲ್ಲಿ ಅವರ ಎದುರಲ್ಲೇ ಹೇಳಿದ್ದೇನೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಅವರಿಂದ ಪಕ್ಷಕ್ಕೆ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ. ಸಿಎಂ ಆಗುವ ಅರ್ಹತೆ ಇದೆ. ಮುಂದೊಂದು ದಿನ ಆಗುವುದು ಖಚಿತ ಎಂದಿದ್ದೇನೆ ಹೊರತು ಶಿವಕುಮಾರ್ ಅವರನ್ನೇ ಸಿಎಂ ಮಾಡಿ ಎಂದಿಲ್ಲ. ಸಾರ್ವಜನಿಕವಾಗಿ ಚರ್ಚೆ ಮಾಡುವುದರಿಂದ ಪಕ್ಷದಲ್ಲಿ ಗೊಂದಲವಾಗುತ್ತದೆ. ನನ್ನ ಮಾತಿನ ಅರ್ಥ ಸಿದ್ದರಾಮಯ್ಯರನ್ನು ಬದಲಾಯಿಸಿ ಅನ್ನೋದು ಅಲ್ಲ ಎಂದು ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.