Ad imageAd image

ಬಿಜೆಪಿಯೊಂದಿಗೆ ಡಿಎಂಕೆ, ಎಐಡಿಎಂಕೆ ಒಳಒಪ್ಪಂದ: ವಿಜಯ್

Nagesh Talawar
ಬಿಜೆಪಿಯೊಂದಿಗೆ ಡಿಎಂಕೆ, ಎಐಡಿಎಂಕೆ ಒಳಒಪ್ಪಂದ: ವಿಜಯ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನಮಕ್ಕಲ್(Namakkal): ತಮಿಳು ಸ್ಟಾರ್ ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಶನಿವಾರ ಕರೂರ್ ಜಿಲ್ಲೆಯ ನಮಕ್ಕಲ್ ನಲ್ಲಿ ರ್ಯಾಲಿ ನಡೆಸಿದರು. ಪಶ್ಚಿಮ ಭಾಗದಲ್ಲಿ ಅದ್ಧೂರಿ ರ್ಯಾಲಿ ನಡೆಸಿದ ಅವರು, ಆಡಳಿತರೂಢ ಡಿಎಂಕೆ ಸೇರಿದಂತೆ ಎಐಡಿಎಂಕೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಡಿಎಂಕೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಎಐಡಿಎಂಕೆ ಸಹ ಒಳ ಒಪ್ಪಂದ ಮಾಡಿಕೊಂಡಿದೆ. ಅದು ಅಪವಿತ್ರ ಮೈತ್ರಿಯಾಗಿದೆ. ಡಿಎಂಕೆಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಎಂದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರ್ಯಾಲಿಯ ಸಲುವಾಗಿ ವಾಹನದ ಮೇಲೆ ವೇದಿಕೆ ರೀತಿ ಸಿದ್ಧಪಡಿಸಲಾಗಿದೆ. ಕೆಲಸದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಶನಿವಾರದ ವೇಳೆ ರ್ಯಾಲಿ ಹಮ್ಮಿಕೊಳ್ಳುತ್ತಿದ್ದೇನೆ ಎಂದರು.

WhatsApp Group Join Now
Telegram Group Join Now
Share This Article