Ad imageAd image

ನಿಮ್ಮ ರಾಜಕೀಯಕ್ಕೆ ತಳವಾರ ಸಮಾಜ ಎಳೆಯಬೇಡಿ: ಸಿದ್ದರಾಮ ತಳವಾರ

Nagesh Talawar
ನಿಮ್ಮ ರಾಜಕೀಯಕ್ಕೆ ತಳವಾರ ಸಮಾಜ ಎಳೆಯಬೇಡಿ: ಸಿದ್ದರಾಮ ತಳವಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ನಮ್ಮ ತಳವಾರ ಸಮಾಜವನ್ನು ರಾಜಕೀಯವಾಗಿ ಎಳೆದಾಡಲಾಗುತ್ತಿದೆ. ರಾಜಕೀಯ ನಾಯಕರು ನಿಮ್ಮ ನಿಮ್ಮ ಸ್ವಹಿತಾಸಕ್ತಿಗಾಗಿ ಸಮಾಜವನ್ನು ಬಲಿಕೊಡಬೇಡಿ. ಪ್ರತಿಯೊಂದು ಸಮಾಜದವರು ಎಲ್ಲ ರಾಜಕೀಯ ಪಕ್ಷಗಳಲ್ಲಿ ಇರುತ್ತಾರೆ. ಅವರವರ ಕೆಲಸವನ್ನು, ಸಮಾಜದ ಕೆಲಸವನ್ನು ಅವರ ರಾಜಕೀಯ ನಾಯಕರ ಮೂಲಕ ಮಾಡುತ್ತಾರೆ. ಇದರಲ್ಲಿ ಸಮಾಜದ ಹೆಸರನ್ನು ರಾಜಕೀಯಾಗಿ ಎಳೆದು ತರಬೇಡಿ ಎಂದು ತಳವಾರ ಸಮಾಜದ ಮುಖಂಡ ಸಿದ್ದರಾಮ ತಳವಾರ ಹೇಳಿದರು.

ಬಿಜೆಪಿ, ಕಾಂಗ್ರೆಸ್ ಸೇರಿ ಯಾವುದೇ ಪಕ್ಷ ಇರಲಿ. ಅಲ್ಲಿ ಎಲ್ಲ ಸಮಾಜದವರು ಇರುವಂತೆ ತಳವಾರ ಸಮಾಜದವರು ಇದ್ದಾರೆ. ಅವರಿಗೆ ಇಷ್ಟವಾದ ನಾಯಕರನ್ನು ಬೆಂಬಲಿಸುತ್ತಾರೆ. ಹಾಗಾಂತ ಇಡೀ ತಳವಾರ ಸಮಾಜ ಒಂದು ಪಕ್ಷಕ್ಕೆ ಸೀಮಿತವಾಗಿದೆ ಎನ್ನುವ ರೀತಿಯಲ್ಲಿ ಮಾತನಾಡುವ ಮೂಲಕ ಜನರ ದಿಕ್ಕು ತಪ್ಪಿಸಬೇಡಿ. ತಪ್ಪು ಸಂದೇಶ ನೀಡಬೇಡಿ. ಇದರಿಂದ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇನ್ನೋರ್ವ ಸಮಾಜದ ಮುಖಂಡ ರವಿಕಾಂತ ನಾಟೀಕಾರ ಮಾತನಾಡಿ, ರಾಜಕೀಯ ಕಾರಣ ಇಟ್ಟುಕೊಂಡು ತಳವಾರ ಸಮಾಜಕ್ಕೆ ತೊಂದರೆಯಾಗುವಂತೆ ಮಾಡಬೇಡಿ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದ ಸಮಾಜ ನಮ್ಮದು. ನಿಮ್ಮ ನಿಮ್ಮ ರಾಜಕೀಯ ಕೆಸರೆರಚಾಟದಲ್ಲಿ ಸಮುದಾಯಕ್ಕೆ ಸಮಸ್ಯೆ ಮಾಡಬೇಡಿ. ಯಾವುದೇ ಪಕ್ಷದವರು ಒಳ್ಳೆಯ ಕೆಲಸ ಮಾಡಿದಾಗ ಮಾಡಿದ್ದಾರೆ ಎಂದು ಹೇಳೋಣ. ಹಾಗಂತ ಇಡೀ ತಳವಾರ ಸಮಾಜ ಒಂದು ಪಕ್ಷಕ್ಕೇ ನಿಷ್ಠವಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡಬಾರದು ಎಂದು ಕಳಕಳಿಯ ಮನವಿ ಮಾಡಕೊಳ್ಳುತ್ತೇನೆ ಎಂದರು. ಈ ವೇಳೆ ಪುಂಡಲೀಕ ಬಿರಾದಾರ, ಸಾಗರ ಜೇರಟಗಿ ಸೇರಿ ಇತರರಿದ್ದರು.

WhatsApp Group Join Now
Telegram Group Join Now
Share This Article