Ad imageAd image

ಏರ್ ಇಂಡಿಯಾ ದುರಂತದ ತಪ್ಪು ನೀವೇ ಹೊತ್ತುಕೊಳ್ಳಬೇಡಿ: ಸುಪ್ರೀಂ ಕೋರ್ಟ್

Nagesh Talawar
ಏರ್ ಇಂಡಿಯಾ ದುರಂತದ ತಪ್ಪು ನೀವೇ ಹೊತ್ತುಕೊಳ್ಳಬೇಡಿ: ಸುಪ್ರೀಂ ಕೋರ್ಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕಳೆದ ಜೂನ್ 12ರಂದು ಏರ್ ಇಂಡಿಯಾ ಎಐ-171 ಅಹಮದಾಬಾದ್ ವಿಮಾನ ಲಂಡನ್ ಗೆ ಹೊರಟಿದ್ದ ವೇಳೆ ದುರಂತ ಸಂಭವಿಸಿ 260 ಜನರು ಪ್ರಾಣ ಕಳೆದುಕೊಂಡರು. ಇದಕ್ಕೆ ವಿಮಾನದ ಪೈಲೆಟ್ ಕಾರಣವೆಂದು ಭಾರತೀಯರು ಯಾರು ನಂಬುವುದಿಲ್ಲ. ದುರಂತಕ್ಕೆ ನಿಮ್ಮ ಮಗ ಕಾರಣವೆಂದು ದೂಷಿಸಬಾರದು, ಅನಗತ್ಯವಾಗಿ ನಿಮ್ಮ ಮೇಲೆ ಹಾಕಿಕೊಳ್ಳಬಾರದು ಎಂದು ಮೃತ ಪೈಲೆಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ, ತಾಯಿಗೆ ಸುಪ್ರೀಂ ಕೋರ್ಟ್ ಹೇಳಿದೆ.

ಸಭರ್ವಾಲ್ ಅವರಿಗೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ರೀತಿ ಹೇಳಿದೆ. ಕೇಂದ್ರ ಸರ್ಕಾರಕ್ಕೆ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ನೋಟಿಸ್ ನೀಡಿದೆ. ಇದೊಂದು ಅಪಘಾತವೆಂದು ವರದಿಯಲ್ಲಿ ಸಹ ಹೇಳಿದೆ. ಈ ದುರಂತಕ್ಕೆ ಪೈಲೆಟ್ ಕಾರಣವೆಂದು ದೂಷಿಸಬಾರದು ಎಂದು 91 ವರ್ಷದ ಪುಷ್ಕರಾಜ್ ಅವರಿಗೆ ಹೇಳಿದೆ.

WhatsApp Group Join Now
Telegram Group Join Now
Share This Article