Ad imageAd image

ಯುವತಿ ಆತ್ಮಹತ್ಯೆ, ಡೆತ್ ನೋಟ್ ನಲ್ಲಿ ಬರೆದಿದ್ದೇನು ಗೊತ್ತಾ?

ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವೈಟ್ ಫೀಲ್ಡ್ ನ ಪ್ರಶಾಂತ ನಗರದಲ್ಲಿ ನಡೆದಿದೆ.

Nagesh Talawar
ಯುವತಿ ಆತ್ಮಹತ್ಯೆ, ಡೆತ್ ನೋಟ್ ನಲ್ಲಿ ಬರೆದಿದ್ದೇನು ಗೊತ್ತಾ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಗರದ ವೈಟ್ ಫೀಲ್ಡ್ ನ ಪ್ರಶಾಂತ ನಗರದಲ್ಲಿ ನಡೆದಿದೆ. ಯುವತಿ ಹೆಸರು ಗೌತಮಿ ಎಂದು ತಿಳಿದು ಬಂದಿದೆ. ಪಿಜಿಯಲ್ಲಿ ವಾಸವಾಗಿದ್ದ ಯುವತಿ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಯಾವ ಊರು, ಎಷ್ಟು ವರ್ಷಗಳಿಂದ ಬೆಂಗಳೂರಲ್ಲಿ ಇದ್ದಳು ಸೇರಿದಂತೆ ಹಲವು ವಿಚಾರಗಳು ತಿಳಿದು ಬರಬೇಕಿದೆ.

ಆತ್ಮಹತ್ಯೆಗೂ ಮೊದಲು ಯುವತಿ ತನ್ನ ಸಾವಿನ ಬಗ್ಗೆ(Death Note) ಬರೆದಿದ್ದಾಳೆ. ಅದರಲ್ಲಿ ಪೋಸ್ಟ್ ಮಾರ್ಟಮ್(Postmortem) ಮಾಡಬೇಡಿ ಹಾಗೂ ಇದರ ಬಗ್ಗೆ ತನಿಖೆ ಮಾಡಬೇಡಿ. ನನ್ನ ಮೃತದೇಹವನ್ನು ನೇರವಾಗಿ ಹಸ್ತಾಂತರಿಸಿ ಎಂದು ಬರೆದಿದ್ದಾಳೆ ಅಂತಾ ತಿಳಿದು ಬರುತ್ತಿದೆ. ಇದರ ಹಿಂದಿನ ಉದ್ದೇಶ ಏನು ಅನ್ನೋ ಅನುಮಾನ ಸಹ ಕಾಡುತ್ತಿದೆ. ಏನೇ ಇದ್ದರೂ ಪೊಲೀಸ್ ತನಿಖೆಯಿಂದ ಇದು ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article