ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಕೆಲವು ಕಿಡಿಗೇಡಿಗಳು ಸಿದ್ದಗಂಗಾ ಮಠದ ಹೆಸರಿನಲ್ಲಿ ದೇಣಿಗೆ ಕೇಳುವ ಮೂಲಕ ಮಠದ ಗೌರವ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಳೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಘದ ಅಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ದೇವೇಂದ್ರಪ್ಪ ಅವಟಿ ಅವರು ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು. ತ್ರಿವಿಧ ದಾಸೋಹದ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಆದರೆ ಮಠದ ಬಗ್ಗೆ ಕೆಲವರು ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಕಿಡಿಗೇಡಿಗಳು ದೇಣಿಗೆ ಕೇಳಲು ಬಂದರೆ ದಯವಿಟ್ಟು ಕೊಡಬೇಡಿ ಎಂದರು.
ಬಂಜೆತನಕ್ಕೆ ಔಷಧಿಗಾಗಿ ಶ್ರೀ ಮಠದಿಂದ ದೇಣಿಗೆ ಸಂಗ್ರಹಕ್ಕಾಗಿ ನಮ್ಮನ್ನು ನೇಮಿಸಿದ್ದಾರೆ ಕೆಲವರು ಮನೆ ಮನೆಗೆ ಬಂದು ದೇಣಿಗೆ ವಸೂಲಿ ಮಾಡುತ್ತಿದ್ದಾರೆ. ಮಠ ಯಾರ ಬಳಿ ಹೋಗಿ ದೇಣಿಗೆ ಕೊಡಿ ಎಂದು ಕೇಳುವುದಿಲ್ಲ. ಇದಕ್ಕಾಗಿ ಯಾರನ್ನೂ ನೇಮಿಸಿಲ್ಲ. ಮಠಕ್ಕೆ ದೇಣಿಗೆ ಸಲ್ಲಿಸಬೇಕು ಎನ್ನುವ ಸದುದ್ದೇಶವಿದ್ದರೆ ಮಠಕ್ಕೆ ನೇರವಾಗಿ ಸಂಪರ್ಕಿಸಿ, ಬ್ಯಾಂಕ್ ಖಾತೆಗೆ ಹಾಕಬಹುದು ಎಂದು ಹೇಳಿದರು.