Ad imageAd image

ಹಂದಿಗನೂರು ಶಾಲೆಗೆ ಸಹಾಯ ಹಸ್ತ ಚಾಚಿದ ದಾನಿಗಳು

ತಾಲ್ಲೂಕಿನ ಹಂದಿಗನೂರ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

Nagesh Talawar
ಹಂದಿಗನೂರು ಶಾಲೆಗೆ ಸಹಾಯ ಹಸ್ತ ಚಾಚಿದ ದಾನಿಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲ್ಲೂಕಿನ ಹಂದಿಗನೂರ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚನ್ನಪ್ಪಗೌಡ ಎಸ್.ಬಿರಾದಾರ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ದೇಣಿಗೆ, ವಸ್ತುಗಳನ್ನು ನೀಡಿದ ದಾನಿಗಳು: ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಐ.ಎಂ,.ಬಿರಾದಾರ, ಪಿಕೆಪಿಎಸ್ ಅಧ್ಯಕ್ಷರಾದ ಅಪ್ಪಾಸಹೇಬ ಪಟ್ಟಣಶೆಟ್ಟಿ ಅವರು ಶಾಲೆಗೆ 25000 ರೂಪಾಯಿಗಳ ದೇಣಿಗೆ ನೀಡಿದರು. ಗ್ರಾಮದ ಯುವಕರಾದ ಸೋಮನಗೌಡ ಬಿರಾದಾರ 2 ಸೀಲಿಂಗ್ ಫ್ಯಾನ್, ಚಂದ್ರಶೇಖರ ಗೌಡಗೇರಿ 25 ತಾಟುಗಳು, ಬಸವರಾಜ ಹಡಪದ ಇವರು ಗ್ಯಾಸ್ ತವಾ ನೀಡಿದರು. ಈ ಮೂಲಕ ತಮ್ಮ ಗ್ರಾಮದ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯ ಮಾಡಿದರು. ಈ ವೇಳೆ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ, ಗ್ರಾಮ ಪಂಚಾಯ್ತಿಯ ಸರ್ವಸದಸ್ಯರು, ಎಸ್.ಡಿ.ಎಂ.ಸಿಯ ಸದಸ್ಯರು ಸೇರಿದಂತೆ ಊರಿನ ಮುಖಂಡರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article