ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಯಸಿಯ ತಾಯಿ ಹಾಗೂ ಸಹೋದರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಿಪ್ಪಾಣಿಯ ಅಕ್ಕೋಳದಲ್ಲಿ ನಡೆದಿದೆ. ಇದರಿಂದಾಗಿ ಇಡೀ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಂಗಳ ನಾಯಕ(45) ಹಾಗೂ ಮಗ ಪ್ರಜ್ವಲ್ ನಾಯಕ(18) ಕೊಲೆಯಾದ ದುರ್ದೈವಿಗಳು. ರವಿ ಎಂಬಾತ ಇಂತಹದೊಂದು ನೀಚ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ. ನಿಪ್ಪಾಣಿ ಠಾಣೆ ಪೊಲೀಸರು ಆರೋಪಿ ರವಿ ಹಾಗೂ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ರವಿ ಹಾಗೂ ಮೃತ ಮಹಿಳೆಯ ಮಗಳು ಕೆಲವು ತಿಂಗಳಿಂದ ಪ್ರೀತಿಸುತ್ತಿದ್ದರು. ಇದು ತಿಳಿದ ತಾಯಿ ಮಗಳಿಗೆ ಬುದ್ದಿಮಾತು ಹೇಳಿದ್ದಾಳೆ. ಆದರೆ, ಮಗಳು ಮಾತು ಕೇಳದೆ ಮುಂದುವರೆಸಿದ್ದಾಳೆ. ಇದರಿಂದಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ರವಿ ಏಕಾಏಕಿ ಇವರ ಮನೆಗೆ ನುಗ್ಗಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ತೆಲೆಗೆ ಗಂಭೀರವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.