Ad imageAd image

ಹಲಸಂಗಿಯಲ್ಲಿ ಸಾಹಿತ್ಯ ಘಮಲು ಪಸರಿಸಿದ ಮಧುರಚೆನ್ನರು: ಡಾ.ಸಂಗಮನಾಥ ಲೋಕಾಪುರ

Nagesh Talawar
ಹಲಸಂಗಿಯಲ್ಲಿ ಸಾಹಿತ್ಯ ಘಮಲು ಪಸರಿಸಿದ ಮಧುರಚೆನ್ನರು: ಡಾ.ಸಂಗಮನಾಥ ಲೋಕಾಪುರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಧುರಚೆನ್ನರ(Madhurachana) 121ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಡಾ.ಸಂಗಮನಾಥ ಲೋಕಾಪುರ ಅವರು ಮಾತನಾಡಿ, ಮಧುರಚೆನ್ನರು ಕಷ್ಟಕರ ವಾದ ಜೀವನ ನಡೆಸುತ್ತಿದ್ದರೂ 1921ರಲ್ಲಿ ನಾಲ್ಕು ಜಿಲ್ಲೆಯ ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮಧುರಗೀತ ಹಾಗೂ ಸಾಹಿತ್ಯದ ಮೂಲಕ ನಾಡಿನ ಹೆಸರಾಂತ ಸಾಹಿತಿಗಳನ್ನು ಹಲಸಂಗಿ ಎಂಬ ಚಿಕ್ಕ ಊರಿನತ್ತ ಕರೆತಂದು ಸಾಹಿತ್ಯದ ಘಮಲು ಪಸರಿಸಲು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ಹಲಸಂಗಿಯ(Halasangi) ಮಾವಿನಮರದ ಮಧುರತೆ ಹಾಗೂ ನವಿಲು ಕುಣಿತದ ಬಗ್ಗೆ ನಾಡಿಗೆ ಪರಿಚಯಿಸಿ, ಹಲಸಂಗಿ ಗೆಳಯರ ಸಾಹಿತ್ಯ ಕೃಷಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯನ್ನು ಶ್ರೀಮಂತಗೊಳಿಸಲು ಅವಿರತ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಸಿ.ಬಿ. ನಾಟೀಕಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಹಲಸಂಗಿ ಗೆಳೆಯಯ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಡಿ.ಬಿ.ಭಜಂತ್ರಿ ಹಾಗೂ ಜೆ.ಎಸ್. ಗಲಗಲಿ, ಎ.ಎ. ಪಾರಸಿ ಉಪಸ್ಥಿತರಿದ್ದರು. ಶ್ರೀದೇವಿ ಪತ್ತಾರ ಹಾಗೂ ತಂಡ ಸುಗಮ ಸಂಗೀತ ಗಾಯನ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಸಿದ್ದು ಸಾವಳಸಂಗ ಕಾರ್ಯಕ್ರಮವನ್ನು ನಿರೂಪಿಸಿದರು.

WhatsApp Group Join Now
Telegram Group Join Now
Share This Article