ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಇಲ್ಲಿನ ಪ್ರಸಿದ್ಧ ಶರಣಬಸವೇಸ್ವರ ಸಂಸ್ಥಾನ ಮಠದ 9ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ(92) ಲಿಂಗೈಕ್ಯರಾಗಿದ್ದಾರೆ. ಅವರ ಕೊನೆಯ ಆಸೆಯಂತೆ ಮಠಕ್ಕೆ ಕರೆದುಕೊಂಡು ಬರಲಾಯಿತು. ಅಲ್ಲಿ ಶರಣಬಸವೇಶ್ವರರ ದರ್ಶನ ಪಡೆದರು. ನಂತರ ಸಂಜೆ 7.30ರ ಸುಮಾರಿಗೆ ದಾಸೋಹಕ್ಕೆ ಕರೆದುಕೊಂಡು ಬರಲಾಯಿತು. ಇದಾದ ಬಳಿಕ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಇವರ ಅಂತಿಮ ದರ್ಶನಕ್ಕೆ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಸಂಸ್ಥಾನದ ದಾಸೋಹ ಮನೆಯಲ್ಲಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಹೂವುಗಳಿಂದ ಮಂಟಪ ನಿರ್ಮಿಸಿ ಪಾರ್ಥಿವ ಶರೀರ ಇರಿಸಲಾಗಿದೆ. ಇವರು ನಿಧನಕ್ಕೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆಯಿದ್ದು, ಸಕಲ ಬಂದೋಬಸ್ತಿ ಮಾಡಲಾಗಿದೆ.