ಪ್ರಜಾಸ್ತ್ರ ಸುದ್ದಿ
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ತೊರೆದಿದ್ದಾರೆ. ಈ ಬಗ್ಗೆ ಪ್ರಾಂಚೈಸಿ ಶನಿವಾರ ಅಧಿಕೃವಾಗಿ ದೃಢಪಡಿಸಿದೆ. 2024ರ ಸೆಪ್ಟೆಂಬರ್ 6ರಂದು ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾಗಿದ್ದರು. 2026ರ ಟೂರ್ನಿಗೂ ಮೊದಲು ತಂಡದಿಂದ ಹೊರ ಬಂದಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಅವರಿಗೆ ಒಂದು ದೊಡ್ಡ ಹುದ್ದೆಯನ್ನು ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಅವರು ಅದನ್ನು ನಿಭಾಯಿಸಲು ಸಾಧ್ಯವಿಲ್ಲ ನಿರ್ಧರಿಸಿದ್ದಾರೆ. ನಮ್ಮ ಪ್ರಾಂಚೈಸಿಗೆ ನೀಡಿದ ಕೊಡುಗೆಗೆ ತಂಡದಿಂದ ಹಾಗೂ ಲಕ್ಷಾಂತರ ಅಭಿಮಾನಿಗಳ ಪರವಾಗಿ ಹೃತಪೂರ್ವಕ ಧನ್ಯವಾದಗಳು ಎಂದು ಹೇಳಿದೆ.