ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ 19 ವರ್ಷದೊಳಗಿನ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕೋಚ್, ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಗೆ ಸ್ಥಾನ ಲಭಿಸಿದೆ. ಬಿಸಿಸಿಐ ಶನಿವಾರ ಪ್ರಕಟಿಸಿದ ಪಟ್ಟಿಯಲ್ಲಿ ಸಮಿತ್ ದ್ರಾವಿಡ್ ಆಯ್ಕೆ ಆಗಿದ್ದಾರೆ. ಇವರ ಜೊತೆಗೆ ಕರ್ನಾಟಕದಿಂದ ಸಮರ್ಥ್.ಎನ್, ಕಾರ್ತಿಕೇಯ ಕೆ.ಪಿ ಹಾಗೂ ಹಾರ್ದಿಕ್ ರಾಜ್ ಸಹ ಆಯ್ಕೆ ಆಗಿದ್ದಾರೆ.
ಸೆಪ್ಟೆಂಬರ್ 21ರಂದು ಪುದುಚೇರಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಸೆ.23 ಹಾಗೂ ಸೆಪ್ಟೆಂಬರ್ 26 ರಂದು 2 ಹಾಗೂ 3ನೇ ಪಂದ್ಯಗಳು ಸಹ ಇದೆ ರಾಜ್ಯದಲ್ಲಿ ನಡೆಯಲಿವೆ. ಇನ್ನು 4 ದಿನಗಳ 2 ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ಸೆಪ್ಟೆಂಬರ್ 30 ರಿಂದ 3 ಹಾಗೂ ಅಕ್ಟೋಬರ್ 7ರಿಂದ 10ರ ತನಕ ನಡೆಯಲಿವೆ.