ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ(Chamarajanagara): ಕೆಎಸ್ಆರ್ ಟಿಸಿ(KSRTC) ಬಸ್ ಚಾಲಕರೊಬ್ಬರು ಮೂರ್ಛೇ ಹೋಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಹನೂರ ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಹತ್ತಿರ ನಡೆದಿದೆ. ಬಸ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಾಲಕ(Driver) ಮೂರ್ಛೇ ಹೋಗಿದ್ದಾರೆ. ಇದರಿಂದಾಗಿ ಬಸ್ ಅಡ್ಡಾದಿಡ್ಡಿಯಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ ಮುಂಭಾಗದಲ್ಲಿ ಕುಳಿತ್ತಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾರ ಜೀವಕ್ಕೂ ಅಪಾಯವಾಗಿಲ್ಲ.