ಪ್ರಜಾಸ್ತ್ರ ಸುದ್ದಿ
ನಟ ದುನಿಯಾ ವಿಜಿ(duniya viji) ಭೀಮ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಸಲಗ ಬಳಿಕ ಭೀಮ ಎನ್ನುವ ಸಿನಿಮಾ ನಿರ್ದೇಶನದ ಜೊತೆಗೆ ನಟನಾಗಿಯೂ ಕಾಣಿಸಿಕೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡ್ರಗ್ಸ್ ಮಾಫಿಯಾದ ಕರಾಳ ಮುಖ ಬಯಲು ಮಾಡುವ ರಾ ಕಲ್ಟ್ ಸಿನಿಮಾ ಮಾಸ್ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ ನಟ ದುನಿಯಾ ವಿಜಿ ತಮ್ಮ 30ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಆದರೆ, ಸಿನಿಮಾಗೆ ಯಾವುದೇ ಟೈಟಲ್ ಫಿಕ್ಸ್ ಮಾಡಿಲ್ಲ. ವಿಕೆ 30 ಎಂದು ಬರೆದು ಫಸ್ಟ್ ಲುಕ್ ಬಿಟ್ಟಿದ್ದಾರೆ.
ತಂಬಿ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕ್ರಾಂತಿಕಾರಿಯ ವೇಷದಲ್ಲಿದ್ದು, ಹೆಗಲ ಮೇಲೆ ಬೃಹತ್ ಊಸುರವಳ್ಳಿಯ ಕುಳಿತಿರುವ ಪೋಸ್ಟರ್ ಇದೆ. ಸಲಗ(Salaga), ಭೀಮ(Bhema) ಸಿನಿಮಾ ಮಾಡಿದ ತಂಡದ ಜೊತೆಯೇ ಈ ಸಿನಿಮಾ ಕೂಡ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬುಡಕಟ್ಟು ಸಮುದಾಯದ ಕಥೆಯೊಂದನ್ನು ಹೇಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲೊಂದು ಕ್ರಾಂತಿಯ ಸಂಕೇತದಂತೆ ಫಸ್ಟ್ ಲುಕ್ ಇದೆ.