ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ನೇರಪ್ರಸಾರವನ್ನು 97 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರು ವಾರ್ತಾ ಇಲಾಖೆ ವತಿಯಿಂದ ಯುಟ್ಯೂಬ್ ಲೈವ್ ಸ್ಟ್ರೀಮಿಂಗ್ ಆಯೋಜಿಸಲಾಗಿತ್ತು. ಆತ್ಯಾಧುನಿಕ ಕ್ಲೌಡ್ ಸ್ಟುಡಿಯೊ ತಂತ್ರಜ್ಞಾನ ಬಳಿಸಿಕೊಂಡು 680ಕ್ಕೂ ವಿವಿಧ ವಾಹಿನಿಗಳು ನೇರಪ್ರಸಾರ ಮಾಡಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 3ರಿಂದ 12ರ ತನಕ ನಗರದ ವಿವಿಧ ಭಾಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿತ್ಯ ಸರಾಸರಿ 60 ಸಾವಿರ ಜನರು ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ, ರವಿ ಬಸ್ರೂರ್, ಹಿಂದಿ ಗಾಯಕ ಬಾದ್ ಷಾ ಅವರ ಕಾರ್ಯಕ್ರಮ 2.65 ಲಕ್ಷ ಜನರು ನೋಡಿದ್ದಾರೆ. ಯುವ ದಸರಾ ಉದ್ಘಾಟನೆ ಕಾರ್ಯಕ್ರಮ 2.30 ಲಕ್ಷ ಜನರು ನೋಡಿದ್ದಾರೆ. ಜಂಬೂ ಸವಾರಿ 1.80 ಲಕ್ಷ, ಪಂಜನಿ ಮೆರವಣಿಗೆ 2.40 ಲಕ್ಷ ಜನರು ನೋಡಿದ್ದಾರೆ. ಈ ನೇರ ಪ್ರಸಾರ ಕಾರ್ಯಕ್ರಮಕ್ಕಾಗಿ ಸುಮಾರು ವೃತ್ತಿಪರ 40 ಟೆಕ್ನಿಸಿಸ್ ಗಳು ಇದಕ್ಕಾಗಿ ಕೆಲಸ ಮಾಡಿದ್ದಾರೆ.